ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ
ಧಾರವಾಡ
ಪತ್ನಿ ಕೊಂದಿದ್ದ ಪತಿಗೆ ಧಾರವಾಡ ಜಿಲ್ಲಾ ನ್ಯಾಯಾಲಯದ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಧಾರವಾಡದ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ತೀರ್ಪು ಪ್ರಕಟ ಮಾಡಿದೆ.
ವಿಶ್ವನಾಥ ಚಿಗರಿ, ಜೀವಾವಧಿ ಶಿಕ್ಷೆಗೊಳಗಾದ ಆರೋಪಿಯಾಗಿದ್ದು,
ನವಲಗುಂದ ತಾಲೂಕಿನ ಶಲವಡಿ ಗ್ರಾಮದ ನಿವಾಸಿಯಾಗಿದ್ದಾನೆ.
2019ರ ಮೇ 15ರಂದು ತನ್ನ ಪತ್ನಿ ಲಕ್ಷ್ಮೀಯ ತಲೆಗೆ ಕಂದ್ಲಿಯಿಂದ ಗಾಯಪಡಿಸಿದ್ದ, ಜಗಳ ಬಿಡಿಸಲು ಬಂದಿದ್ದ ಅತ್ತೆ ದೇವಕ್ಕಳ ಮೇಲೆ ಹಲ್ಲೆ ಕೂಡ ನಡೆಸಿದ್ದ ಆರೋಪಿ ವಿಶ್ವನಾಥ.
ಈ ಬಗ್ಗೆ ದೂರು ದಾಖಲಿಸಿ ತನಿಖೆ ಕೈಗೊಂಡಿದ್ದ ನವಲಗುಂದ ಪೊಲೀಸರು
ಸರ್ಕಾರ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಪ್ರಶಾಂತ ತೊರಗಲ್ ಅವರು ವಾದ ಮಂಡಿಸಿದ್ದಾರೆ.
ವಿಚಾರಣೆ ನಡೆಸಿ ವಾದ -ಪ್ರತಿವಾದ ಆಲಿಸಿದ ಬಳಿಕ,
ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶೆ ಶೋಭಾರಾಣಿ ಹಿರೇಮಠ
ಪತ್ನಿ ಲಕ್ಷ್ಮೀ ಕೊಲೆಗೆ ಜೀವಾವಧಿ ಶಿಕ್ಷೆ, 1 ಲಕ್ಷ ರೂ. ದಂಡ ಹಾಗೂ ಅತ್ತೆ ದೇವಕ್ಕಳ ಕೊಲೆ ಯತ್ನಕ್ಕೆ 10 ವರ್ಷ ಜೈಲು, ಮತ್ತು 10 ಸಾವಿರ ರೂ.ದಂಡ ವಿಧಿಸಲಾಗಿದೆ.
ಮೂವರು ಮಕ್ಕಳಿಗೆ ತಲಾ 35 ಸಾವಿರ ಪರಿಹಾರ ನೀಡಲು ಆದೇಶ ಕೊಡಲಾಗಿದೆ.