ರಾಜಕೀಯರಾಜ್ಯಸ್ಥಳೀಯ ಸುದ್ದಿ

ಪತ್ನಿ ಸಮೇತ ನೇಣಿಗೆ ಶರಣಾದ ಪತ್ರಕರ್ತ!

ವಿಜಯಪುರ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಎಪಿಎಂಸಿ ಬಳಿ ಯುವ ಪತ್ರಕರ್ತ ತಿಪ್ಪಣ್ಣ ಸಿದ್ದಪ್ಪ ಹೊಸಮನಿ (34) ಮತ್ತು ಆತನ ಪತ್ನಿ ಸುಜಾತಾ (30) ಅಕ್ಕಪಕ್ಕದ ಕೋಣೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಂಪತಿಗಳು!

ತಿಪ್ಪಣ್ಣ ಖಾಸಗಿ ವಾಹಿನಿ ( ಪವರ್ ಟವಿ) ಬೆಂಗಳೂರಿನಲ್ಲಿ ಕ್ಯಾಮರಾಮ್ಯಾನ್ ಆಗಿದ್ದ, ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ.‌ ಮುದ್ದೇಬಿಹಾಳ ತಾಲೂಕಿನ ಕೊಣ್ಣೂರು ಗ್ರಾಮದ ತಿಪ್ಪಣ್ಣ ಕಳೆದ 4-5 ತಿಂಗಳ ಹಿಂದಷ್ಟೇ ಮುದ್ದೇಬಿಹಾಳ ತಾಲೂಕಿನ ಕೆಸಾಪೂರ ಗ್ರಾಮದ ಪ್ರೀತಿಸಿದ ಯುವತಿಯೊಂದಿಗೆ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ.

ತಿಪ್ಪಣ್ಣ ಹೊಸಮನಿ!

ಗಂಡ, ಹೆಂಡತಿ ಇಬ್ಬರೂ ಪಟ್ಟಣದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.ಆದರೆ ಇಬ್ಬರ ಸಾವಿಗೆ ಕಾರಣ ಇನ್ನೂ ನಿಗೂಢ ವಾಗಿದೆ ಎನ್ನಲಾಗಿದೆ. ಘಟನೆ ಮಾಹಿತಿ ಪಡೆದು ಪಿಎಸೈ ಆರೀಫ ಮುಷಾಪುರಿ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು. ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button