ಸ್ಥಳೀಯ ಸುದ್ದಿ

ಪರಿಚಯಸ್ಥನಿಂದಲೇ ಯುವತಿ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ

ಧಾರವಾಡ

ಧಾರವಾಡದಲ್ಲಿ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ‌

ಮೂರು ದಿನಗಳ ಹಿಂದೆ ಸವದತ್ತಿಗೆ ಹೋಗುವ ರಸ್ತೆಯಲ್ಲಿ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಳು.‌

ಶೋಭಾ ಮಾದರ, ಮೃತಪಟ್ಟ ಯುವತಿಯಾಗಿದ್ದು,
ಧಾರವಾಡ ತಾಲೂಕಿನ ಮರೇವಾಡ ಗ್ರಾಮದವರಾಗಿದ್ದು, ಶೋಭಾ
ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಳು.

ಈಕೆ ಕೊಲೆ ಮಾಡಿರುವ ಮುನೀರ ಮಕಾನದಾರ ಸಂಪಿಗೆನಗರದ ನಿವಾಸಿಯಾಗಿದ್ದು, ಆರೋಪಿಗೆ ಯುವತಿ ಮೊದಲಿನಿಂದಲೂ ಪರಿಚಯವಿದ್ದು, ಸುಮಾರು ಬಾರಿ ಜಗಳವಾಗಿತ್ತು.

ಜಗಳದ ಬಗ್ಗೆ ಊರಿನ ಹಿರಿಯರಿಗೆ ಮಾಹಿತಿ ತಿಳಿದ ನಂತರ ರಾಜಿಸಂಧಾನ ಮಾಡಿ ಸರಿ ಮಾಡಿದ್ದರು.

ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *