ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಪರೀಕ್ಷೆ ಬರೆದವನು ಬರೆಸಿದವನು ಇಬ್ಬರಿಗೂ ದಂಡ ಸಹೀತ ಶಿಕ್ಷೆ ನೀಡಿದ ನ್ಯಾಯಾಲಯ

ಹುಬ್ಬಳ್ಳಿ

2007 ನೇ ಸಾಲಿನಲ್ಲಿ ಧಾರವಾಡದ ಎಸ್ .ಡಿ.ಎಂ ಎಂಜಿನೀಯರಿಂಗ್ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ಅಸಲಿ ಅಭ್ಯರ್ಥಿ ಬದಲಿಗೆ ನಕಲಿ ಅಭ್ಯರ್ಥಿ ಪರೀಕ್ಷೆ ಬರೆದಿದ್ದರು.

*ಧಾರವಾಡ ಮೂಲದ ಜಾಫರ್ ತಡಕೋಡ ಗ್ರಾಮಿಣ ಶಾಸಕರ ಹೆಸರನ್ನೇ ಬಂಡವಾಳ ಮಾಡಿಕೊಂಡದ್ದ ಎನ್ನಲಾಗಿದೆ*
ಈತ ಎಂಜಿನೀಯರಿಂಗ್ ವಿದ್ಯಾರ್ಥಿಯಾಗಿದ್ದಾಗ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪ್ರಶಾಂತ ಬಡಿಗೇರ ಎನ್ನುವನನ್ನು ಕರೆಯಿಸಿ ಪರೀಕ್ಷೆ ಬರೆಸಿದ್ದ.

*3 ನೇ ಸೆಮಿಸ್ಟರ್ ಹಾಗೂ 4 ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಈ ಗೋಲ್ಮಾಲ್ ನಡೆದಿತ್ತು. ‌*

ವಿಶ್ವೇಶ್ವರಯ್ಯ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ಯುನಿರ್ವಸಿಟಿ ಅಧಿಕಾರಿಗಳು ಏಕಾಏಕಿ ಪರೀಕ್ಷೆ ಪರಿಶೀಲನೆ ಮಾಡಿದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು.

*ಈ ಪ್ರಕರಣ ವಿದ್ಯಾಗಿರಿ ಪೊಲೀಸ ಠಾಣೆಯಲ್ಲಿ ದಾಖಲಾಗಿತ್ತು.*

ನ್ಯಾಯಾಲಯದಲ್ಲಿ ಇದ್ದ ಈ ಪ್ರಕರಣವಿದೀಗ ಇದೀಗ 14 ವರ್ಷಗಳ  ಸುದೀರ್ಘ ವಿಚಾರಣೆಯ ಬಳಿಕ ಇಬ್ಬರು ಆರೋಪಿಗಳಿಗೂ ಶಿಕ್ಷೆ ಆಗಿದೆ.

*ಪ್ರಕರಣ ಹೇಗೆಲ್ಲಾ ನಡೆಯಿತು  ಎನ್ನುವುದಕ್ಕೆ ಈ ದಾಖಲಾತಿಗಳ ಸಾರಾಂಶ ಇಲ್ಲಿದೆ ನೋಡಿ…*

ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಾಫರ್ ತಡಕೋಡ ಪ್ರಕರಣದಿಂದ  ಬಚಾವ್ ಆಗಲು ಎಲ್ಲಾ ಪ್ರಯತ್ನ ಮಾಡಿದ್ರೂ ಅದು ಸಾಧ್ಯವಾಗಿಲ್ಲಾ.

ಪೊಲೀಸರು ಈತನನ್ನು ಇನ್ನುವರೆಗೂ ಅರೆಸ್ಟ್ ಮಾಡದೇ ಇರುವುದು ಪೊಲೀಸ್ ಇಲಾಖೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟಿಸಿದೆ.

Related Articles

Leave a Reply

Your email address will not be published. Required fields are marked *

Back to top button