ಪಾಲಿಕೆ ಕಚೇರಿ ಮುಂದೆ ಸಾಮಾಜಿಕ ಹೋರಗಾರ ಕೊರವರ ಪ್ರತಿಭಟನೆ
ಧಾರವಾಡ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು 320ಕ್ಕೂ ಹೆಚ್ಚು ನೀರು ಸರಬರಾಜು ನೌಕರರಿಂದ ಅಮರಣ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.
ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ 358 ನೌಕರರಿಗೆ ಕಳೆದ 8 ತಿಂಗಳಿಂದ ಸಂಬಳವೂ ನೀಡದೆ, ಮರು ನೇಮಕವೂ ಮಾಡದೆ ಬಡವರ ಮಕ್ಕಳ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿರುವ ಜನವಿರೋಧಿ ನೀತಿ ಖಂಡಿಸಿ
ಧಾರವಾಡದ ಮಹಾನಗರ ಪಾಲಿಕೆ ಕಚೇರಿ ಎದುರು 320ಕ್ಕೂ ಹೆಚ್ಚು ನೀರು ಸರಬರಾಜು ನೌಕರರು ಸೋಮವಾರ ಬೆಳಗ್ಗೆಯಿಂದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಅಮರಣ
ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಟೆಂಟ್ ಹಾಕಿಪ್ರತಿಭಟನೆ ಮಾಡಲು ಪೊಲೀಸರು ಅವಕಾಶ ಕೊಡದೇ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿಯೂ ನಡೆಯಿತು.
ಈ ಅಮರಣ ಉಪವಾಸ ಸತ್ಯಾಗ್ರಹ ದಲ್ಲಿ
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ, ನೌಕರರ ಸಂಘದ ಅಧ್ಯಕ್ಷ ಮಹಾಂತೇಶ ಗೌಡರ, ನೌಕರರಾದ ಅಮಿತ್ ತಾರಿಹಾಳ, ಮಂಜುನಾಥ ಚವ್ಹಾಣ, ಶರಣು ಕಂಬಾರ, ಶೇಖು ಬೆಟಗೇರಿ, ಪ್ರಕಾಶ ಹುಲ್ಲೂರ, ಬಸನಗೌಡ ಜಕ್ಕನಗೌಡರ, ಅಣ್ಣಪ್ಪ ಕಾಳಗಿ, ಸಂತೋಷ ಕರಿಲಿಂಗಣ್ಣನವರ, ನಿಂಗಪ್ಪ ಕಡೆಮನಿ, ಮಂಜುನಾಥ ಕರಿಲಿಂಗಣ್ಣವರ, ರಾಜು ಭೂಮಕ್ಕನವರ, ರಾಜಪತ್ರ ದೊಡ್ಡಮನಿ, ಶ್ರೀಮತಿ ಬಸಮ್ಮ ರತ್ನಣ್ಣವರ ಸೇರಿ 320ಕ್ಕೂ ಹೆಚ್ಚು ನೌಕರರು ಭಾಗವಹಿಸಿದ್ದಾರೆ.