ಸ್ಥಳೀಯ ಸುದ್ದಿ
ಪಿಎಸ್ಐ ನೇಮಖಾತಿಯಲ್ಲಿ ಅಕ್ರಮ ಸಿಐಡಿ ತನಿಖೆಗೆ ಆದೇಶ
ಬೆಂಗಳೂರು
ರಾಜ್ಯದಲ್ಲಿ 545 ಪಿಎಸ್ಐಗಳ ನೇಮಖಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಈ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
ಪಿಎಸ್ಐ ಆಗಲು ಅಕ್ರಮ ಎಸಗಿದವರಿಗೆ ಇದೀಗ ಎದೆಯಲ್ಲಿ ಢವಢವ ಶುರುವಾಗಿದೆ.
ಪೋಸ್ಟಿಂಗ್ ಮಾಡಿಸಿಕೊಂಡು ಆರಾಮಾಗಿ ಇರುತ್ತೆ ಲೈಫ್ ಎನ್ನುವ ಪಿಎಸೈಗಳ ಭವಿಷ್ಯ ಇದೀಗ ಮುಳುಗುವ ನೌಕೆಯಂತಾಗಿದೆ..
ಪವರ್ ಸಿಟಿನ್ಯೂಸ್ ಕನ್ನಡ ಸತ್ಯ ಸದಾಕಾಲ.