ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

“ಪೊಲಿಸ್ ಕಂಪ್ಲೇಟ್ ಕೊಟ್ಟರೆ ಕಬ್ಬಿನ ಹೊಲದಲ್ಲಿ ಸುಡ್ತಿವಿ” ಎಂದವರ ಬಂಧನ ಯಾವಾಗ?

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆದು ಸ್ಟೋರ್ ಮ್ಯಾನೇಜರ್ ಮೇಲೆ ತಂಡವೊಂದು ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಲ್ಲದೆ ” ಪೋಲಿಸ್ ಕಂಪ್ಲೇಟ್ ಕೊಟ್ರೆ ಕಬ್ಬಿನ ಹೊಲದಲ್ಲಿ ಜಿವಂತ ಸುಟ್ಟು ಹಾಕ್ತಿನಿ ” ಎಂದು ಜೀವ ಬೆದರಿಕೆ ಹಾಕಿರುವ ಘಟನೆ ವಿದ್ಯಾನಗರ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ೧೩/೧೧/೨೦೨೧ರ ಸಂಜೆ ವಿಶಾಲ್ ಮೆಘಾ ಮಾರ್ಟ್ ಬಳಿ ನಡೆದಿತ್ತು.

ಹೌದು… ವಿಶಾಲ್ ಮೇಘಾ ಮಾರ್ಟ್ ಸ್ಟೋರ್ ಮ್ಯಾನೇಜರ್ ಯುವರಾಜ ಎಂಬುವವರ ಮೇಲೆ ಹಲ್ಲೆ ನಡೆಸಿದ,ಅದೆ ಕಾಂಪ್ಲೆಕ್ಸ್ ಅಂಗಡಿಯೊಂದರ ಮಾಲಿಕ ಬಸವರಾಜ್ ಕೆಲಗೇರಿ ಆ್ಯಂಡ್ ಗ್ಯಾಂಗ್ ನಿಂದ ಹಲ್ಲೆ ಮಾಡಿಲಾಗಿದೆ‌ ಎಂದು ಹಲ್ಲೆಗೆ ಒಳಗಾದ ವ್ಯಕ್ತಿಯೇ ಮಾಹಿತಿ ನೀಡಿದ್ದರು. ಹಲ್ಲೆ ವೇಳೆ ಯುವರಾಜ್ ನ ಬಳಿ ಇದ್ದ ಒಂದು ಬಂಗಾರದ ಚೈನ್, 30ಸಾವಿರ ನಗದು, ಮೊಬೈಲ್ ದರೋಡೆ ಮಾಡಿರುವುದಾಗಿ ಯುವರಾಜ್ ದೂರು ನೀಡಿ ಮೂರು ದಿನ ಕಳೆದಿವೆ.

ಇನ್ನೂ ಘಟನೆಯಲ್ಲಿ ತೀವ್ರವಾಗಿ ಥಳಿತಕ್ಕೊಳಗಾಗಿದ್ದ ಯುವರಾಜ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೆತರಸಿ ಕೊಳ್ಳುತ್ತಿದ್ದಾರೆ.
ಆದರೆ ವಿದ್ಯಾನಗರ ಪೊಲೀಸ್ ಠಾಣೆಗೆ ಹಲ್ಲೆ ಮಾಡಿದ ಯಾವೊಬ್ಬ ಆರೋಪಿಗಳನ್ನೂ ಸಹ ಕರೆಸಿ ವಿಚಾರಣೆ ನಡೆಸಿಲ್ಲವೆಂದು ಹಲ್ಲೆಗಿಡಾದವರು ಪೊಲಿಸರ ನಡೆ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿದ್ದೇವೆ ಈಗಾಗಲೇ ದೂರು ದಾಖಲಿಸಿಕೊಳ್ಳಲಾಗಿದೆ.ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನ ಶೀಘ್ರದಲ್ಲೇ ಬಂದಿಸುತ್ತೆವೆ ಎನ್ನುತ್ತಾರೆ.ವಿದ್ಯಾನಗರದ ಪೊಲಿಸರು

ಎನೆ ಇರಲಿ ಕಬ್ಬಿನ ಹೊಲದಲ್ಲಿ ಸುಟ್ಟು ಹಾಕುವ ಧಮ್ಕಿ ಇಟ್ಟವರನ್ನ ಅವಳಿ ನಗರದ ಪೊಲೀಸರ ಪಾಠ ಎಂಥದ್ದು ಅನ್ನೋದನ್ನ ಸ್ವತಃ ಆಯುಕ್ತರೆ ತೋರಿಸಿ ಕೊಡಬೆಕಿದೆ.

Related Articles

Leave a Reply

Your email address will not be published. Required fields are marked *

Back to top button