ಸ್ಥಳೀಯ ಸುದ್ದಿ

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ

ಧಾರವಾಡ

ಧಾರವಾಡದ ಉಪನಗರ ಠಾಣೆ ಕರ್ತವ್ಯ‌ನಿರತ‌ ಸಿಬ್ಬಂದಿ‌ ಮೇಲೆ ಹಲ್ಲೆ ಮಾಡಿದ‌ ಆರೋಪಿತರಿಗೆ ಧಾರವಾಡದ ಜೆಎಂಎಫಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಧಾರವಾಡ ಉಪನಗರ ಠಾಣೆಯ ಗುನ್ನಾ ನಂಬರ: 276/2014 ರಲ್ಲಿ
ಕಲಂ:353, 332, 504 IPC .ಅಡಿ ಪ್ರಕರಣ ದಾಖಲಾಗಿದ್ದ,
A1: ಶಂಕರೆಪ್ಪ ಹಂಚಿನಮನಿ.
A2: ಶಿವಪ್ಪ ಮುಗಳಿ.
A3: ಬಸವರಾಜ ತೇಜಪ್ಪನವರ.
A4: ಬಸವರಾಜ ಕುರಗುಂದ @ ಕರಡಿಗುಡ್ಡ. ಎನ್ನುವ ಆರೋಪಿಗಳು ಶಿಕ್ಷೆಗೆ ಒಳಪಟ್ಟವರಾಗಿದ್ದಾರೆ.

07/11/2014 ರ ಪ್ರಕರಣದಲ್ಲಿ ನಡೆದ ಹಲ್ಲೆಯ ಬಗ್ಗೆ ಪಿರ್ಯಾದಿದಾರರು ಸತೀಶ ಜಾಲವಾಡಿಗಿ ( ಪೊಲೀಸ ಕಾನಸ್ಟೇಬಲ್) ದೂರು ದಾಖಲಿಸಿದ್ದರು.
ಅಪರಾಧ ಎಸಗಿದ ಬಗ್ಗೆ ಸಾಬೀತಾಗಿದ್ದರಿಂದ ನಾಲ್ಕೂ ಜನ ಅಪರಾಧಿಗಳಿಗೆ ಮಾನ್ಯ ಪ್ರಧಾನ‌ ಸಿ.ಜೆ ಮತ್ತು‌ ಜೆ.ಎಮ್.ಎಫ್.ಸಿ‌ ನ್ಯಾಯಾಲಯ ಧಾರವಾಡದ ನ್ಯಾಯಾಧೀಶರಾದ ‘ ಶ್ರೀ ಗಿರೀಶ ಆರ್.ಬಿ ‘ ರವರು ನಾಲ್ಕೂ ಜನ ಆರೋಪಿತರಿಗೆ
ಕಲಂ 332 ಮತ್ತು 34 IPC ಅಡಿಯಲ್ಲಿ‌ ಒಂದು ವರ್ಷ ಸಾದಾ ಶಿಕ್ಷೆ
ಕಲಂ: 353 IPC ಅಡಿಯಲ್ಲಿ ಆರು ತಿಂಗಳು‌ ಸಾದಾ‌ ಶಿಕ್ಷೆ.
ಕಲಂ: 504 IPC ಅಡಿಯಲ್ಲಿ ಮೂರು ತಿಂಗಳು ಸಾದಾ‌ ಶಿಕ್ಷೆ ಮತ್ತು 3000/- ರೂಪಾಯಿಗಳ
ದಂಡ ವಿಧಿಸಿ‌ ಎಲ್ಲ ಶಿಕ್ಷೆಗಳು ಏಕ ಕಾಲಿನವಾಗಿ ಅನುಭವಿಸುವಂತೆ ಆದೇಶಿಸಿದ್ದಾರೆ.

ಸದರ ಪ್ರಕರಣದಲ್ಲಿ ಶ್ರೀ ಆರ್, ಎ, ಹಟ್ಟಿ ಪೊಲೀಸ ಇನ್ಸಪೇಕ್ಟರ ರವರು ಆರೋಪಿತರ ಮೇಲೆ ದೊಷಾರೋಪಣ ಪಟ್ಟಿ‌ ಸಲ್ಲಿಸಿದ್ದರು.

ಸದರ ಪ್ರಕರಣದಲ್ಲಿ ‘ಶ್ರೀಮತಿ ಸವಿತಾ ಹಾನಗಲ’ ಸಹಾಯಕ ಸರಕಾರಿ‌ ಅಭಿಯೋಜಕರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button