ಪೌರಕಾರ್ಮಿಕರ ದಿಲ್ ಖುಷ್ ಮಾಡಿದ ಮಹಾನಗರ ಪಾಲಿಕೆ!
ಹುಬ್ಬಳ್ಳಿ
ಬೆಳಕಾದರೆ ಸಾಕು ಪೊರಕೆ ಹಿಡಿದು ನಗರದ ಸ್ಚಚ್ಛತೆಗೆ ಮುಂದಾಗುವ ಪಾಲಿಕೆಯ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ಪೂರೈಸಲು 2015ರಲ್ಲೆ ಸರಕಾರ ಆದೇಶಿಸಿತ್ತು.
ಆದರೆ ಕಳೆದ ಇಪ್ಪತ್ತು ತಿಂಗಳಿನಿಂದ ಪೌರಕಾರ್ಮಿಕರಿಗೆ ನೀಡುತ್ತಿದ್ದ ಉಪಹಾರವನ್ನು ಕಾರಣಾಂತರಗಳಿಂದ ಪೂರೈಸಲು ಆಡಳಿತ ವಿಭಾಗ ಹಿಂದೇಟು ಹಾಕಿತ್ತು. ಇದರ ವಿರುದ್ಧ ಧ್ವನಿ ಎತ್ತಿ ಹೋರಾಟ ಕೈಗೊಂಡಿದ್ದ ಅವಳಿನಗರದ ಪೌರಕಾರ್ಮಿಕರ ಸಂಘ ಭಾಗಶಃ ಯಶಸ್ಸು ಕಂಡಿದೆ.
ಬೆಳ್ಳಂ ಬೆಳಿಗ್ಗೆಯೆ ಸಾರ್ವಜನಿಕ ಸೇವೆಗೆ ಮುಂದಾಗುವ ಪೌರಕಾರ್ಮಿಕರ ಆರೋಗ್ಯಕ್ಕೆ ಹಾನಿಯಾಗುವ ಎಲ್ಲ ಸಾಧ್ಯತೆಗಳನ್ನ ಪಾಲಿಕೆಗೆ ತೊರಿಸಿಕೊಡುವಲ್ಲಿ ಸಂಘದ ಹೋರಾಟ ಸಫಲ ವಾಗಿತ್ತು.
ಅದರಂತೆ ಇದೀಗ ಪೌರಕಾರ್ಮಿಕರಿಗೆ ಅವಳಿ ನಗರದ ಮಹಾನಗರ ಪಾಲಿಕೆಯಿಂದಲೆ ಬೆಳಗಿನ ಉಪಹಾರ ನೀಡಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪಾಲಿಕೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರ ಕಾರ್ಮಿಕರಿಗೂ ಉಪಹಾರದ ಕೊರೆತೆ ನಿಗಿದಂತಾಗಿದೆ.
ಇನ್ನೂ ಅವಳಿನಗರದ ಪಾಲಿಕೆಯ ಪೌರಕಾರ್ಮಿಕರ ಸಂಘದ ಅಧ್ಯಕ್ಷರಾದ ವಿಜಯ್ ಗುಂಟ್ರಾಳ್ ಅವರು ಇದು ಪಾಲಿಕೆಯ ಮಾನವಿಯತೆಯ ಮತ್ತೊಂದು ಗುಣವಾಗಿದೆ ಎಂದು ಗುಣಗಾನ ಮಾಡಿದ್ದು ಹು.ಧಾ.ಮ.ಪಾಲಿಕೆಯ ಎಲ್ಲ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಅಭಿನಂದನೆ ತಿಳಿಸಿದ್ದಾರೆ.