ಸ್ಥಳೀಯ ಸುದ್ದಿ

ಬಸವಣ್ಣನವರ ಮೂರ್ತಿ ತೆರವುಗೊಳಿಸದಂತೆ ಮನವಿ

ಧಾರವಾಡ

ಧಾರವಾಡದ ಶ್ರೀನಗರ ವೃತ್ತದಲ್ಲಿ ಸುಮಾರು ವರ್ಷಗಳ ಹಿಂದೆ ಚಿಕ್ಕದಾದ ಬಸವಣ್ಣನವರ ಮೂರ್ತಿ ಇರುವುದು ಅನೇಕ ಜನರಿಗೆ ತಿಳಿದ ವಿಷವಾಗಿದೆ ಹೀಗಾಗಿ ಮೂರ್ತಿ ತೆರವುಗೊಳಿಸಬಾರದು ಎಂದು ಜಯಕರ್ನಾಟಕ ‌ಜನಪರ ವೇದಿಕೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ
ಶ್ರೀನಗರ ವೃತ್ತವು ಕ್ರಮೇಣವಾಗಿ ಬದಲಾಯಿಸಿ ರಸ್ತೆ ಅಗಲೀಕರಣ ಚಿಕ್ಕದಾಗುತ್ತ ಬಂದಿರುತ್ತದೆ.

ಕೆಲವು ವಿದ್ಯಾರ್ಥಿಗಳು ವೃತ್ತದ ಪಕ್ಕದಲ್ಲಿ ನಿಂತಾಗ ವೃತ್ತವು ಒಡೆದು ಹೋದ ಭಾಗದಲ್ಲಿ ಬಸವಣ್ಣನವರ ಮೂರ್ತಿವು ದೊರೆತಿದ್ದು ಮೂರ್ತಿಯನ್ನು ಅಲ್ಲಿನ ಹಿರಿಯರು ಮತ್ತು ವಿದ್ಯಾರ್ಥಿಗಳೊಂದಿಗೆ ಸೇರಿ ಮೂರ್ತಿಯನ್ನು ಸ್ವಚ್ಛಗೊಳಿಸಿ ಬಣ್ಣ ಹಚ್ಚಿ ಅಲ್ಲಿ ಮರುಸ್ಥಾಪನೆ ಮಾಡಿ ಪೂಜೆ ಸಲ್ಲಿಸಿದ್ದಾರೆ.

ಆದರೆ ಪಾಲಿಕೆ ಅಧಿಕಾರಿಗಳು ಮೂರ್ತಿಯನ್ನು ಏಕಾಏಕಿ ತೆಗೆದುಕೊಂಡು ಹೋಗಿದ್ದರಿಂದ ಪಾಲಿಕೆ ಅಧಿಕಾರಿಗಳ ಜೊತೆಗೆ ಅಲ್ಲಿಯ ಹಿರಿಯರು ಚರ್ಚಿಸಿದಾಗ ಮೂರ್ತಿಯನ್ನು ಮರಳಿ ನೀಡಿ ಅದೇ ಸ್ಥಳದಲ್ಲಿ ಮರುಸ್ಥಾಪನೆ ಮಾಡಿದ್ದು ಇರುತ್ತದೆ.

ಕಾರಣ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಿಕ್ಕಿ ನೇತೃತ್ವದಲ್ಲಿ ಸನ್ಮಾನ್ಯ ಶ್ರೀ ಆಯುಕ್ತರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವರಿಗೆ ಬಸವಣ್ಣನ ಮೂರ್ತಿಯನ್ನು ಮುಂದೆ ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದೆಂದು ಎಂದರು .

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಜಾದವ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಸೋಮು ಬಲ್ವಾಡ್, ಕಮಲಪೂರ್ ವಾಲೆ, ಬಸವರಾಜ್ ಕುಂದರಗಿ, ಕಲ್ಲಪ್ಪ ಕುಂದರ್ಗಿ, ಮಲ್ಲಪ್ಪ ಬಾವಿ, ಮಲ್ಲಿಕಾರ್ಜುನ ಸುಂಡಿ, ಸಂಜಯ ಬೆಳ್ಳಕ್ಕಿ, ಗಣೇಶ್ ಹತ್ತಿವರ , ಷಣ್ಮುಖ, ಹತ್ತಿವರ, ಚಂದನ್ ಸೌದಿ, ಸುರೇಶ್ ಮಾರಡಗಿ, ಗದಗೇಶ ಸುಣಗಾರ , ರಾಜು ಆಲದಕಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button