ಸ್ಥಳೀಯ ಸುದ್ದಿ

ಬಿಜೆಪಿ ಮುಖಂಡನಿಗೆ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ

ಧಾರವಾಡ

ಧಾರವಾಡ ಜಿಲ್ಲೆಯ
ಬಿಜೆಪಿ ನಾಯಕ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿರುವ ಪಕ್ಷದ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ ಹಾಗೂ ಯಡಿಯೂರಪ್ಪ ಅವರ ಅತ್ಯಾಪ್ತ, ಬಳಗದಲ್ಲಿ ಗುರುತಿಸಿಕೊಂಡಿರುವ ಧಾರವಾಡ ತಾಲೂಕಿನ 71 ಮತ ಕ್ಷೇತ್ರದ ಉಪ್ಪಿನಬೆಟಗೇರಿ ಗ್ರಾಮದ ತವನಪ್ಪ ಅಷ್ಟಗಿ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದೆ.

ಆಗಸ್ಟ 11 ರಂದು ಅಷ್ಟಗಿ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿರುವ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದೆ.

2023 ನೇ ವಿಧಾನಸಭೆ ಚುನಾವಣೆಗೆ ಶಾಸಕ ಸ್ಥಾನದ ಮೇಲೆ ಕಣ್ಣು ಇಟ್ಟಿರುವ ಬಿಜೆಪಿ ನಾಯಕನಿಗೆ ಹೈಕಮಾಂಡ್ ನಿಗಮ ಮಂಡಳಿ ಸ್ಥಾನ ಕೊಟ್ಟು ಮನವೋಲಿಸುವ ಕೆಲಸ ಮಾಡಿದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ತಮಗೆ ಸಿಕ್ಕಿರುವ ಹುದ್ದೆಯನ್ನು ಪ್ರಾಮಾಣಿಕವಾಗಿ ಗೌರವಪೂರ್ವಕವಾಗಿ ನಿಭಾಯಿಸಿಕೊಂಡು ಹೋಗುವುದರ ಜೋತೆಗೆ ಪಕ್ಷ ತಮ್ಮ ಮೇಲೆ ಇಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗುವುದಾಗಿ ತವನ್ನಪ್ಪ ಅಷ್ಟಗಿ ಅವರು ತಿಳಿಸಿದ್ದಾರೆ.

ಅಷ್ಟಗಿ ಅವರು ನಿಗಮ ಮಂಡಳಿ ಅಧ್ಯಕ್ಷರಾಗಿದ್ದಕ್ಕೆ ಶಾಸಕರಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ, ಮೇಯರ್ ಈರೇಶ ಅಂಚಟಗೇರಿ ಅವರು ಸೇರಿದಂತೆ ಇತರೆ ನಾಯಕರು ಅಷ್ಟಗಿ ಅವರಿಗೆ ಶುಭಾಶಯಗಳ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button