ಸ್ಥಳೀಯ ಸುದ್ದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷರಿಗೆ ಮೇಯರ್ ಅಂಚಟಗೇರಿ ಪತ್ರ

ಬೆಂಗಳೂರು

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಅಭಿವೃದ್ಧಿಗೆ ವೇಗ ಕೊಡುವುದರ ಜೋತೆಗೆ ಮಾದರಿ ಮೇಯರ್ ಎನಿಸಿಕೊಂಡಿರುವ ಈರೇಶ ಅಂಚಟಗೇರಿ ಅವರು ಇದೀಗ ವಿಧಾನಸಭೆ ಚುನಾವಣೆಗೆ ಜನಸೇವೆಗಾಗಿ ಸಿದ್ಧರಾಗಿದ್ದಾರೆ.

ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರಿಗೆ ಅಂಚಟಗೇರಿ ಅವರು‌ ಪತ್ರ ಬರೆದಿದ್ದಾರೆ

ಪತ್ರದ‌ ಸಾರಾಂಶ ಹೀಗಿದೆ.
ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ಕಾರ್ಯ ನಿರ್ವಹಿಸುತ್ತಾ ಮಹಾನಗರ ಪಾಲಿಕೆ ಸದಸ್ಯನಾಗಿ ಪಕ್ಷ ನೀಡಿದ ವಿವಿಧ ಜವಾಬ್ದಾರಿ ಶಿರಸಾವಹಿಸಿ ನಿರ್ವಹಿಸಿದ್ದೇನೆ.

ಪ್ರಸ್ತುತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾಗಿ ಕಾರ್ಯನಿರ್ವಹಿಸುತ್ತಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮ74 ವಿಧಾನಸಭಾ ಕ್ಷೇತ್ರದ ಭಾಜಪ ಅಭ್ಯರ್ಥಿಯಾಗಲು ಹಾಗೂ ಮತಕ್ಷೇತ್ರದ ಸೇವೆಗೈಯಲು ಇಚ್ಚಿಸುತ್ತಿದ್ದೇನೆ.

ಹಿಂದೂ ಸಂಪ್ರದಾಯದ ಮೊದಲ ಹಬ್ಬ ಯುಗಾದಿಯಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರು ಶ್ರೀ ಸಂಜಯ ಕಪಟಕರ ಹುಬ್ಬಳ್ಳಿ ಧಾರವಾಡ ಪಶ್ಚಿಮ ಮಂಡಳ ಅಧ್ಯಕ್ಷರು ಶ್ರೀ ಬಸವರಾಜ ಗರಗ ಅವರಿಗೆ ಮನವಿ ಪತ್ರ ಸಲ್ಲಿಸಿ ಪಕ್ಷದ ವರಿಷ್ಠರು ಕೈಗೊಂಡ ನಿರ್ಣಯಕ್ಕೆ ಬದ್ಧನಾಗಿದ್ದು, ಯಾವುದೇ ಸಾಮಾನ್ಯ ಕಾರ್ಯಕರ್ತನಿಗೈ ಪಕ್ಷದ ಟಿಕೆಟ ನೀಡಿದರೂ, ಹಗಲಿರುಳು ಶ್ರಮಿಸಿ ಭಾರತೀಯ ಜನತಾ ಪಕ್ಷದ ಕಮಲ ಅರಳಿಸುವುದೇ ನನ್ನ ಆದ್ಯ ಕರ್ತವ್ಯ .

ದೇಶ ಮೊದಲು ಪಕ್ಷ ನಂತರ ನಾನು ಕೊನೆ ಈ ಸಿದ್ಧಾಂತದ ಮೇಲೆ ಇಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಟಿಕೆಟಗಾಗಿ ಮನವಿ ಮಾಡುತ್ತಿದ್ದೇನೆ.

ಇಂತಿ
ತಮ್ಮ ಸೇವಕ

ಈರೇಶ ಅಂಚಟಗೇರಿ
ಮಹಾಪೌರರು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

Related Articles

Leave a Reply

Your email address will not be published. Required fields are marked *

Back to top button