ಸ್ಥಳೀಯ ಸುದ್ದಿ
ಬೈಕ್ ಅಪಘಾತ ಇಬ್ಬರು ಯುವಕರು ಸಾವು
ಧಾರವಾಡ
ಉಪನಗರ ಪೊಲೀಸ್ ಠಾಣೆ ಕೂಗಳತೆ ಅಂತರದಲ್ಲಿ ಕೆಸಿ ಪಾರ್ಕ ಮುಂದೆ ಬೈಕ್ ಸವಾರರಿಬ್ಬರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವೇಗವಾಗಿ ಬಂದ ಬೈಕ್ ಸವಾರರಿಬ್ಬರು ಮೊದಲು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ನಂತರ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಫರ್ಹಾನ್ ಹಾಗೂ ಮತೀನ ಎನ್ನುವ ಇಬ್ಬರು ಯುವಕರು ಸಾವನ್ನಪ್ಪಿದ್ದು, ಕಾರಿನ ಚಾಲಕ ಅಪಘಾತದಲ್ಲಿ ಯುವಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು, ಕಾರ್ ನಿಲ್ಲಿಸದೇ ತೆಗೆದುಕೊಂಡು ಹೋಗಿದ್ದಾನೆ.
ಈ ಬಗ್ಗೆ
ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.