ಹುಬ್ಬಳ್ಳಿ

ಬೈಕ್ ಅಪಘಾತ- ಗಾಯಗೊಂಡವನಿಗೆ ಮಾನವೀಯತೆ ತೋರಿದ ಪಿಎಸ್ಐ ಪ್ರಮೋದ್-ಸಾರ್ವಜನಿಕರ ಮೆಚ್ಚುಗೆ

ಹುಬ್ಬಳ್ಳಿ

ಭೈರಿದೇವರಕೊಪ್ಪದ ಸಮೀಪ ಸನಾ ಕಾಲೆಜು ಬಳಿ ಬೈಕ್ ಅಪಘಾತದಲ್ಲಿ ವ್ಯಕ್ತಿಯೊರ್ವ ಬಿದ್ದು ಗಾಯಗೊಂಡ ಘಟನೆ ನಡೆದಿದೆ

ಧಾರವಾಡದತ್ತ ಹೊರಟಿದ್ದ ಬೈಕ್ ಸವಾರ ಸನಾ ಕಾಲೇಜು ಎದುರಿಗಿರುವ ಸ್ಪೀಡ್ ಬ್ರೇಕರ್ ದಾಟುವಾಗ ನಿಯಂತ್ರಣ ಕಳೆದು ಕೊಂಡು ಈ ಅಪಘಾತ ಸಂಭವಿಸಿದೆ.

ಇದರಿಂದ ವೇಗದಲ್ಲಿದ್ದ ಸ್ಕೂಟರ್ ಜಂಪ್ ಆಗಿ ಬೈಕ್ ಸವಾರ ಕೆಳಗೆ ಬಿದ್ದು
ತೀವ್ರವಾಗಿ ಗಾಯಗೊಂಡಿದ್ದಾನೆ.‌

ದಾರಿ ಮಧ್ಯೆ ನವನಗರದ ಪೊಲಿಸ್ ಠಾಣೆಗೆ ಹೊರಟಿದ್ದ ಪ್ರೋಬೇಷನರಿ ಪಿಎಸ್ಐ ಪ್ರಮೋದ್ ನಡುರಸ್ತೆಯಲ್ಲೆ ಬಿದ್ದಿದ್ದ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ , ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ಘಟನೆ ನಡೆದ ಸ್ಥಳಕ್ಕಾಗಮಿಸಿದ ಉತ್ತರ ಸಂಚಾರಿ ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button