ಸ್ಥಳೀಯ ಸುದ್ದಿ

ಭಕ್ತರ ಹರ್ಷೋದ್ಗಾರದ ನಡುವೆ ಯಶಸ್ವಿಯಾಗಿ ನಡೆದ ನಯಾನಗರದ ಜಾತ್ರೆ

ಬೆಳಗಾವಿ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರದ ಶ್ರೀ ಸುಖದೇವಾನಂದ ಮಠದ ಜಾತ್ರಾಹೋತ್ಸವ 3 ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಯಿತು.

ರಾಜ್ಯದ ನಾನಾ ಭಾಗಗಳು ಸೇರಿದಂತೆ ಹೊರ ರಾಜ್ಯದ ಭಕ್ತರು ಈ ವಿಶೇಷ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಜಾತ್ರೆಯ 3 ನೇ ದಿನ 24 ಜೋಡಿ ಸಾಮೂಹಿಕ ವಿವಾಹಗಳು ನಡೆದವು.

ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿಗಳು ಕೆಂಡದ ನಡಿಗೆ ನಡೆದ ಬಳಿಕ, ಶ್ರೀಗಳ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ಧನ್ಯರಾದ್ರು.

Related Articles

Leave a Reply

Your email address will not be published. Required fields are marked *

Back to top button