ಭಾರತರತ್ನ,ಸಂವಿಧಾನ ಶಿಲ್ಪಿ ಅವರ ಜಯಂತಿ ಕಾರ್ಯಕ್ರಮ
ಧಾರವಾಡ
ಭಾರತರತ್ನ,ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131 ನೇ ಜಯಂತಿ ಅಂಗವಾಗಿ
ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ,ಶಾಸಕರಾದ ಅಮೃತ ದೇಸಾಯಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು..
ಇದಕ್ಕೂ ಮೊದಲು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು ಬೆಳಿಗ್ಗೆ ಮೆರವಣಿಗೆಗೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಚಾಲನೆ ನೀಡಿದರು.
ಕವಿವ ಸಂಘದ ಬಳಿಯ ಡಾ.ಅಂಬೇಡ್ಕರ್ ಹಾಗೂ ಕಲಾಭವನದ ಆವರಣದ ಬಸವೇಶ್ವರ ಮೂರ್ತಿಗಳಿಗೆ ಗೌರವ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಪ್ರೊಬೆಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ, ತಹಸೀಲ್ದಾರ ಡಾ.ಸಂತೋಷಕುಮಾರ ಬಿರಾದಾರ,ಮುಖಂಡರಾದ ಲಕ್ಷ್ಮಣ ಬಕ್ಕಾಯಿ,ಸುಶೀಲಾ ಚಲವಾದಿ,ರಾಜು ಕೋಟೆಣ್ಣವರ,ದೇವಾನಂದ ರತ್ನಾಕರ , ಡಾ.ಗುರುಮೂರ್ತಿ ಯರಗಂಬಳಿಮಠ,ಮತ್ತಿತರರು ಇದ್ದರು..