ಸ್ಥಳೀಯ ಸುದ್ದಿ

ಭೀಕರ ರಸ್ತೆ ಅಪಘಾತ‌‌ 3 ಜನ ಸಾವು

ಧಾರವಾಡ

ಧಾರವಾಡದ ರಾಷ್ಟ್ರೀಯ ಹೆದ್ದಾರಿ ಕ್ಯಾರಕೊಪ್ಪ ಬಳಿ ಭೀಕರ ರಸ್ತೆ ಅಪಘಾತ‌ ನಡೆದು, 3 ಜನರು ಸಾವನ್ನಪ್ಪಿದ್ದಾರೆ.

ತಡರಾತ್ರಿ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲಿ ಮೃತಪಟ್ಟರೆ, ಇನ್ನೊಬ್ಬ ಆಸ್ಪತ್ರೆಗೆ ಸಾಗಿಸುವ ವೇಳೆಗೆ ಸಾವನ್ನಪ್ಪಿದ್ದಾನೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮೃತರು ಕೆಆರ್ ನಗರದ ಪುಟ್ಟೆಗೌಡ (33), ದೀಪಕ (26) ಹಾಗೂ ಹೊಳೆನರಸಿಪುರದ ಚಂದನಗೌಡ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button