ಸ್ಥಳೀಯ ಸುದ್ದಿ

ಭೀಕರ ರಸ್ತೆ ಅಪಘಾತ 5 ಮಂದಿ‌ ಸಾವು

ಧಾರವಾಡ

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಫಘಾತ ಸಂಭವಿಸಿ,
ಸ್ಥಳದಲ್ಲಿಯೇ ಐವರ ಸಾವನ್ನಪ್ಪಿದ್ದಾರೆ.

ಧಾರವಾಡ ತಾಲೂಕಿನ‌ ತೇಗೂರ ಗ್ರಾಮದ ಬಳಿ ಈ ಘಟನೆ ನಡೆದಿದೆ.‌

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ,
ಕಾರನಲ್ಲಿದ್ದ ನಾಲ್ವರ ಸಾವನ್ನಪ್ಪಿದ್ರೆ,
ಪಕ್ಕದಲ್ಲಿ ಹೊರಟಿದ್ದ ಓರ್ವ ಪಾದಚಾರಿಗೂ ಕಾರು ತಾಗಿ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಬೆಳಗಾವಿಯಿಂದ ಧಾರವಾಡ ಕಡೆ ಬರುತ್ತಿದ್ದ ಕಾರು ಈ ಅಪಘಾತಕ್ಕೆ ಈಡಾಗಿದೆ.

ಕಾರಿನಲ್ಲಿದ್ದ 3 ಜನರಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಗರಗ ಠಾಣೆ ಪೊಲೀಸರ ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.

ಅಪಘಾತದಲ್ಲಿ ಮೃತರು ಹಾಗೂ ಗಾಯಗೊಂಡವರ ವಿವರ ಹೀಗಿದೆ.

KA 22N 9373 punto. Fiat

MH 09 EM 7589. Truck

ಮೃತರ ಹೆಸರುಗಳು

1)ನಾಗಪ್ಪ ಈರಪ್ಪ ಮುದ್ದೊಜಿ- 29
2)ಮಹಂತೇಶ್ ಬಸಪ್ಪ ಮುದ್ದೊಜಿ- 40
ಅವರಾದಿ. ಗ್ರಾಮ
3)ಬಸವರಾಜ್ ಶಿವಪುತ್ರಪ್ಪ ನರಗುಂದ-35

4)ಶ್ರೀಕುಮಾರ್ ನರಗುಂದ – 05
ನಿಚ್ಚಣಕಿ ಗ್ರಾಮ

5) ಈರಣ್ಣಾ ಗುರುಸಿದ್ದಪ್ಪ ರಾಮನಗೌಡರ್ -35
ಹೆಬ್ಬಳಿ ಹಾಲಿ ಧಾರವಾಡ. (ಪಾದಚಾರಿ)

ಗಾಯಾಳುಗಳು

1)ಶ್ರವನಕುಮಾರ್ ಬಸವರಾಜ ನರಗುಂದ ವಯಸ್ಸು 07👉 ಕಿಮ್ಸ್ ಹುಬ್ಬಳ್ಳಿಗೆ

2)ಮಡಿವಾಳಪ್ಪ ರಾಜು ಅಳ್ನಾವರ ವಯಸ್ಸು 22 ಸಾ ಅವರಾದಿ 👉 ಕೆಮ್ಸ್ ಹುಬ್ಬಳ್ಳಿಗೆ

3)ಪ್ರಕಾಶ್ ಗೌಡ ತಂದೆ ಶಂಕರಗೌಡ ಪಾಟೀಲ್ ವಯಸ್ಸು 22 ಸಾ ಅವರಾದಿ ಜಿಲ್ಲಾ ಆಸ್ಪತ್ರೆ ದಾರವಾಡದಲ್ಲಿ ಒಳರೋಗಿ

4)ಮಂಜುನಾಥ ತಂದೆ ಮಹಾಂತೇಶ್ ಮುದ್ದು ಜಿ ವಯಸ್ಸು 22 ಸಾ ಅವರಾಧಿ ಗ್ರಾಮ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿ

Related Articles

Leave a Reply

Your email address will not be published. Required fields are marked *