ಸ್ಥಳೀಯ ಸುದ್ದಿ
ಮನೆಗಳ ಹಂಚಿಕೆ ತಾರತಮ್ಯದ ಮರು ತನಿಖೆಗೆ ಶಾಸಕ ವಿನಯ ಕುಲಕರ್ಣಿ ಸದನದಲ್ಲಿ ಒತ್ತಾಯ
ಬೆಂಗಳೂರು
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಈ ಹಿಂದೆ ಮಳೆ ಆವಾಂತರದ ಹಿನ್ನೆಲೆಯಲ್ಲಿ ಮನೆಗಳು ಬಿದ್ದಿದ್ದು, ಹಣ ಪಡೆದು ಮನೆಗಳ ಹಂಚಿಕೆ ಆಗಿದೆ ಎಂದು ಅಧಿವೇಶನದಲ್ಲಿ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದ್ರು.
ಸದನದಲ್ಲಿ ಮಾತನಾಡಿದ ಶಾಸಕರು, ಮನೆಗಳ ಹಂಚಿಕೆಯ ವಿಷಯದಲ್ಲಿ ತಾರತಮ್ಯವಾಗಿದ್ದು ನಿಜ. ಶೇಕಡಾ 40 ರಷ್ಟು ಮಂದಿಗೆ ಇರಲು ಕ್ಷೇತ್ರದಲ್ಲಿ ಸ್ವಂತ ಜಾಗವಿಲ್ಲಾ. ಅವರಿಗೆ ವಾಸಕ್ಕೆ ಅನುಕೂಲವಾಗಲು ಜಾಗವನ್ನು ಕಲ್ಪಿಸಿಕೊಡಬೇಕು.
ಇನ್ನು ಮನೆ ಬಿದ್ದವರಿಗೆ ನಿಜವಾಗಲೂ ಇದ್ದಂತಹ ಫಲಾನುಭವಿಗಳಿಗೆ ಹಣ ಪಾವತಿಯಾಗಿಲ್ಲಾ. ಈ ಬಗ್ಗೆ ತನಿಖೆ ಆಗಬೇಕೆಂದು ಶಾಸಕ ವಿನಯ ಕುಲಕರ್ಣಿ ಸದನದಲ್ಲಿ ಒತ್ತಾಯಿಸಿದ್ರು.