ಸ್ಥಳೀಯ ಸುದ್ದಿ

ಮನೆಗಾಗಿ ಜೀವ ಬಿಟ್ಟ ಮಾಧನಭಾವಿ ರೈತ

ಧಾರವಾಡ

ಮಳೆಹಾನಿಯಿಂದ ಬಿದ್ದ ಮನೆಗೆ ಸರ್ಕಾರದ ಪರಿಹಾರದಲ್ಲಿ ತಾರತಮ್ಯವಾಗಿದೆ ಎಂದು ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನಲ್ಲಿ‌ ನಡೆದಿದೆ.

ಧಾರವಾಡ ತಾಲೂಕಿನ ಮಾದನಭಾವಿಯಲ್ಲಿ ಈ ಘಟನೆ ನಡೆದಿದ್ದು, ಭೀಮಪ್ಪ ಪಾಟೀಲ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.

ಮನೆ ಬಿದ್ದಾಗ ಪರಿಹಾರ ಕೊಡಲು ಸರ್ಕಾರ ಸೂಚಿಸಿದ್ದ ಮಾರ್ಗ ಸೂಚಿ ಅನ್ವಯ ಬಿ ಕೆಟಗರಿಯಲ್ಲಿ ಇದ್ದ ಹೆಸರು ಸಿ‌ ಕೆಟಗರಿ ಲಿಸ್ಟನಲ್ಲಿ ಬಂದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದ ರೈತ.

5 ಲಕ್ಷ ಪರಿಹಾರದ ಬದಲು ಕೆವಲ 50 ಸಾವಿರ ಬರುತ್ತೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button