ಸ್ಥಳೀಯ ಸುದ್ದಿ

ಮಲ್ಲಿಕಾರ್ಜುನ ಖರ್ಗೆ ಹಾಗೂ ಈಶ್ವರ ಖಂಡ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆ ಕೆ.ಎಂ.ಯೂ ಖಂಡನೆ

ಹಿರಿಯ ಕಾಂಗ್ರೇಸ್ ನಾಯಕ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯದ ಹಿರಿಯ ಲಿಂಗಾಯತ ಮುಖಂಡ ಅರಣ್ಯ ಸಚಿವ ಈಶ್ವರ ಖಂಡ್ರೆ ರವರ ವಿರುದ್ಧ ಮಾಜಿ ಗೃಹ ಸಚಿವ ಶಾಸಕ ಅರಗಜ್ಞಾನೇಂದ್ರ ವರ್ಣ ಬೇದ, ಜಾತಿ ಬೇದ, ಮತ್ತು ಮನೂವಾದದ ಮನೊಸ್ಥಿತಿಯನ್ನು ಹೊಂದಿ ಸಾರ್ವಜನಿಕವಾಗಿ ಕೀಳರಿಮೇಯ ಹೇಳಿಕೆಯನ್ನು ತಮ್ಮ ಮಾತುಗಳ ಮೂಲಕ ಹೊರಹಾಕಿರುವದನ್ನು ಕರ್ನಾಟಕ ಮುಸ್ಲಿಂ ಯೂನಿಟಿ ಬಲವಾಗಿ ಖಂಡಿಸುತ್ತದೆ.

ರಾಷ್ಟದ ಒಬ್ಬ ದಲಿತ ನಾಯಕನನ್ನು ಅವರ ಶರೀರದ ಬಣ್ಣವನ್ನು ಬೇರೆಯಾವುದೊ ವಿಷಯಕ್ಕೆ ಹೊಲಿಸಿ ನಾಲಿಗೆ ಹರಿಬಿಟ್ಟಿರುವದನ್ನು ನೋಡಿದರೆ. ಸಂಘ ಪರಿವಾರದ ಮನೊಸ್ಥಿತಿಗೊತ್ತಾಗುತ್ತದೆ. ಇಂತಹ ಮನೊಸ್ಥಿತಿಯವರೊಂದಿಗೆ ಈ ನಾಡಿನ ದಲಿತರು ದೂರ ಇರಬೇಕು.ಮತ್ತು ಆರ್.ಎಸ್.ಎಸ್ ಹಾಗೂ ಬಿಜೆಪಿಯನ್ನು ಅರಿತು ಅದರಿಂದ ಹೊರ ಬರಬೇಕೆಂದು ಕರ್ನಾಟಕ ಮುಸ್ಲಿಂ ಯೂನಿಟಿಯ ಜಬ್ಬಾರ ಕಲಬುರ್ಗಿ, ದಲಿತರಲ್ಲಿ ಮನವಿ ಮಾಡಿದ್ದಾರೆ.

ಬಹಿರಂಗವಾಗಿ ಮಲ್ಲಿಕಾರ್ಜುನ ಖರ್ಗೆ ರವರ ಬಣ್ಣದ ಬಗ್ಗೆ ಹಿಯಾಳಿಸಿ ಮಾತನಾಡಿ ಅವಮಾನಿಸಿರುವ ಅರಗಜ್ಞಾನೇಂದ್ರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವರದಿ: ಮಹೇಶ್ ಮೇಟಿ

Related Articles

Leave a Reply

Your email address will not be published. Required fields are marked *

Back to top button