ಹುಬ್ಬಳ್ಳಿ

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ಪದ್ಮಶ್ರೀ ಪುರಸ್ಕೃತ ಡಾ. ವಿಜಯಸಂಕೇಶ್ವರ್ ಅವರಿಗೆ ಅಭಿನಂದನೆ

ಹುಬ್ಬಳ್ಳಿ

ಭಾರತ ಸರ್ಕಾರದ ಪ್ರತಿಷ್ಠಿತ “ಪದ್ಮಶ್ರೀ” ಪ್ರಶಸ್ತಿಗೆ ಭಾಜನರಾದ ವಿ.ಆರ್.ಎಲ್. ಸಂಸ್ಥೆಯ ಮಾಲೀಕರು, ಪ್ರಖ್ಯಾತ ಉದ್ಯಮಿ ಹಾಗೂ ಮಾಜಿ ಸಂಸದರಾದ ಡಾ. ವಿಜಯಸಂಕೇಶ್ವರ್ ಅವರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿನಂದನೆ ತಿಳಿಸಿದ್ದಾರೆ.

ಕಠಿಣ ಪರಿಶ್ರಮ, ಸಮಯ ಪಾಲನೆ, ಆರ್ಥಿಕ ಶಿಸ್ತು ಹಾಗೂ ಮಹತ್ವಾಂಕ್ಷೆ ವಿಜಯಸಂಕೇಶ್ವರ್ ಯಶಸ್ಸಿನ ಅಂಶಗಳು. ಪ್ರತಿ ಕೆಲಸದಲ್ಲೂ ನೂರಕ್ಕೆ ನೂರು ಪ್ರತಿಶತ ತೊಡಗಿಕೊಳ್ಳುವ ಅವರ ಗುಣ, ಉದ್ಯಮದ ಮಜಲುಗಳು, ಸೂಕ್ಷ್ಮ ವಿಷಯಗಳನ್ನು ಗ್ರಹಿಸುವ ಅವರ ಶಕ್ತಿ, ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಲು ಸಹಕಾರಿಯಾಗಿವೆ. ಸಕ್ರಿಯ ರಾಜಕೀಯದಲ್ಲಿ ತೊಡಗಿಕೊಂಡಾಗಲೂ ಅವರು ತಮ್ಮ ಮೌಲ್ಯಗಳಲ್ಲಿ ರಾಜೀ ಮಾಡಿಕೊಳ್ಳಲಿಲ್ಲ. ಸಮಯ ಪಾಲನೆಗೆ ಹೆಸರಾಗಿದ್ದರು. ಟ್ರಾನ್ಸಪೋರ್ಟ್, ರಾಜಕೀಯ, ಮಾಧ್ಯಮ ಕ್ಷೇತ್ರದಲ್ಲಿಯೂ ಅವರು ಯಶಸ್ಸುಗಳಿಸಿದ್ದಾರೆ. ಲಕ್ಷಾಂತರ ಯುವಕರಿಗೆ ಮಾದರಿಯಾಗಿದ್ದಾರೆ. ಅವರ ಯಶಸ್ವೀ ಜೀವನ ಮುಂದುವರಿಯಲಿ, ಹೆಚ್ಚಿನ ಅತ್ಯುನ್ನತ ಪ್ರಶಸ್ತಿಗಳು ಅವರನ್ನು ಅರಸಿ ಬರಲಿ ಎಂದು ಜಗದೀಶ್ ಶೆಟ್ಟರ್ ಶುಭಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button