ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಮಾಜಿ ಸಚಿವ ಜಬ್ಬಾರಖಾನ ಹೊನ್ನಳ್ಳಿ ನಿಧನ!

ಹುಬ್ಬಳ್ಳಿ :ರಾಜ್ಯ ರಾಜಕೀಯದಲ್ಲಿ ಬಹುಬೇಗ ಬೆಳೆದು ಸಚಿವರಾಗುವ ಮೂಲಕ ಅವಳಿನಗರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ಜಬ್ಬಾರಖಾನ ಹೊನ್ನಳ್ಳಿ ಇಂದು ಇಹ ಲೋಕ ತೈಜಿಸಿದ್ದಾರೆ.

ದಿ.ಮಾಜಿ ಸಚಿವ ಜಬ್ಬಾರಖಾನ ಹೊನ್ನಳ್ಳಿ

ರಾಜಕೀಯದಲ್ಲಿನ ಅನೇಕ ಏರಿಳಿತಗಳನ್ನು ಕಂಡಿದ್ದ ಅವರು ಕಟ್ಟ ಕಡೆಯ ಸಾರಿ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಕೆಜೆಪಿ ಪಕ್ಷವನ್ನು ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ನವರ ಸಮ್ಮುಖದಲ್ಲೆ ಸೇರಿದ್ದರು.

ಕೆಜೆಪಿ ಪಕ್ಷ ಸೆರ್ಪಡೆಯಾದಾಗ!

ಆದರೆ ಬದಲಾವಣೆಯ ದಿನಗಳಲ್ಲಿ ಯಡಿಯೂರಪ್ಪ ಮತ್ತೆ ಮಾತೃ ಪಕ್ಷಕ್ಕೆ ಮರಳಿದ್ದರಿಂದ ಮಾಜಿ ಸಚಿವ ಜಬ್ಬಾರಖಾರ ಹೊನ್ನಳ್ಳಿ ರಾಜಕೀಯದಲ್ಲಿ ತಟಸ್ಥರಾಗಿ ಉಳಿದು ಬಿಟ್ಟಿದ್ದರು.

ಆದರೆ ರಾಜಕೀಯ ಎಲ್ಲ ಪಕ್ಷದ ಮುಖಂಡರೊಂದಿಗೆ ಅವಿನಾಭಾವ ಸಂಭಂದ ಹೊಂದಿದ್ದು ಕೂಡ ಅಷ್ಟೇ ಸತ್ಯ. ಸ್ಥಳೀಯ ಅಂಜುಮನ್ ಸಂಸ್ಥೆಯಲ್ಲೂ ಕೂಡ ಅದ್ಯಕ್ಷರಾಗಿ ಅಲ್ಪಸಂಖ್ಯಾತರ ಅಭಿವೃದ್ಧಿ ಗಾಗಿ ಶ್ರಮಿಸಿದ್ದಾರೆ, ಅಂಜುಮನ್ ಸಂಸ್ಥೆಯಿಂದ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಬಡ ಕುಟುಂಬದ ವಿಧ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದರು. ಕಾಲ ಕಳೆದಂತೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ ಪರಮೇಶ್ವರ ಕೂಡ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು.

ಇಂದು ಬೆಳಗ್ಗೆ ಆರೋಗ್ಯದಲ್ಲಿ ಏರುಪೆರಾಗಿ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅಪಾರ ಬಂಧು ಬಳಗ ಅಭಿಮಾನಿಗಳನ್ನು ಅಗಲಿದ್ದಾರೆ.
ಜಬ್ಬಾರ ಖಾನ ಹೊನ್ನಳ್ಳಿಯರ ನಿಧನಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ, ಅಲ್ತಾಪ್ ಹಳ್ಳೂರ,ಅನೀಲಕುಮಾರ ಪಾಟೀಲ್,ನಾಗರಾಜ್ ಛೆಬ್ಬಿ,ಇಸ್ಮಾಯಿಲ್ ಟಮಾಟಗಾರ, ಸಾಧನಾ ಸಂಸ್ಥೆಯ ಇಸಬೆಲ್ಲಾ ಜೆವಿಯರ್, ಪಾಲಿಕೆ ಸದಸ್ಯರಾದ ಇಂಬ್ರಾಣ ಎಲಿಗಾರ್,ಆರೀಫ ಭದ್ರಾಪೂರ, ಹಾಗೂ ಮದನ್ ಕುಲಕರ್ಣಿ ರಜತ್ ಉಳ್ಳಾಗಡ್ಡಿಮಠ,ಕಿರಣ್ ಪಾಟೀಲ್ ಕುಲಕರ್ಣಿ,ನಾವಿದ ಮುಲ್ಲಾ,ಗಂಗಾಧರ ದೊಡವಾಡ ಸೆರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button