ಸ್ಥಳೀಯ ಸುದ್ದಿ

ಮಿಸ್ಟರ್ ಹುಬ್ಬಳ್ಳಿ ಮಿಲನ್ ಕಾಂಬಳೆಗೆ ಪಿ.ಹೆಚ್.ಡಿ ಪದವಿ ಪ್ರಧಾನ

ಧಾರವಾಡ: ಇಲ್ಲಿನ ಪ್ರತಿಷ್ಟಿತ
ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ
ತಂತ್ರಜ್ಞಾನ ಹಾಗೂ ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮಿಲನ ವಿ. ಕಾಂಬಳೆ ಅವರು ಮಂಡಿಸಿದ “ಐಡೆಂಟಿಫಿಕೇಶನ್ ಆ್ಯಂಡ್ ಕ್ಯಾರಕ್ಟರೈಜೇಶನ್ ಆಫ್ ಡೌನಿ ಮೆಲ್ಡಿವ್ ರೆಸ್ಪಾನ್ಸಿವ್ ಮೈಕ್ರೊಆರ್‌ಎನ್‌ಯೆಸ್ ಇನ್ ಇಂಡಿಯನ್ ವಿಟಿಸ್ ವಿನಿಫೆರಾ ಬೈ ಹಾಯ್- ಥ್ರೋಪುಟ್ ಸಿಕ್ವೆನ್ಸಿಂಗ್” ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದೆ.
ಇವರಿಗೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಧೀಶ ಜೋಗಯ್ಯ ಅವರು ಮಾರ್ಗದರ್ಶನ ಮಾಡಿದ್ದರು.

ಮಿಲನ್ ಬಹುಮುಖ ಪ್ರತಿಭೆ:

ಸಾಮಾನ್ಯ ಕುಟುಂಬವೊಂದರಿಂದ ಬಂದ ಮಿಲನ್ ಕಾಂಬಳೆ ಎಲ್ಲ ಕಷ್ಟಗಳ ಮಧ್ಯಯೂ ತಮ್ಮೆಲ್ಲ ಆಸಕ್ತಿಗಳನ್ನು ಪೋಷಿಸುತ್ತಲೆ ಬಂದ ಒಬ್ಬ ಬಹುಮುಖ ಪ್ರತಿಭೆ. ತಮ್ಮ ಕಾಲೇಜು ದಿನಗಳಿಂದಲೂ ನೃತ್ಯ, ಹಾಗೂ ಬಾಡಿ ಬಿಲ್ಡಿಂಗ್ ಕುರಿತು ಅಪಾರ ಆಸಕ್ತಿಯನ್ನು ಹೊಂದಿದ್ದರು.
ಇವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದಿದ್ದಾರೆ.

ಮಿಸ್ಟರ್ ಹುಬ್ಬಳ್ಳಿ:

ಅದಕ್ಕೆ ಸಾಕ್ಷಿ ಎಂಬಂತೆ ಧಾರವಾಡ ಬಾಡಿ ಬಿಲ್ಡಂಗ್ ಅಸೋಯೇಶನ್ ವತಿಯಿಂದ ಹುಬ್ಬಳ್ಳಿಯಲ್ಲಿ ಜರುಗಿದ ೧೯ನೇ ಮಿಸ್ಟರ್ ಹುಬ್ಬಳ್ಳಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಸಿ ಮಿಸ್ಟರ್ ಹುಬ್ಬಳ್ಳಿ ಎನಿಸಿದ್ದರು.

ಈ ಮೂಲಕ ಸಂಶೋಧನೆ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಮಿಲನ್ ಸಾಧನೆ ಮಾಡಿದ್ದಾರೆ.
ತಮ್ಮ ಸಂಶೋಧನಾ ಅವಧಿಯಲ್ಲಿ ಮಿಲನ್ ಚೀನಾ ಸೇರಿದಂತೆ ಇತರಡೆ ಪ್ರವಾಸ ಕೈಗೊಂಡು ಸಂಶೋಧನಾ ಕಾರ್ಯ ಪೂರ್ಣಗೊಳಿಸಿದ್ದಾರೆ.

ಒಟ್ಟಿನಲ್ಲಿ ಸಂಶೋಧಕರು ಎಂದ ತಕ್ಷಣ ಕೇವಲ ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಲ್ಲ ದೇಹದಾರ್ಢ್ಯಕ್ಕೂ ಸೈ ಎಂದು ಮಿಲನ್ ತಮ್ಮ ಪ್ರತಿಭೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
ಮಿಲನ್‌ನ ಈ ಸಾಧನೆಗೆ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಮತ್ತು ಸ್ಮೂಕ್ಷ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎ.ಬಿ. ವೇದಮೂರ್ತಿ ಮತ್ತು ಸಂಶೋಧನಾ ಮಾರ್ಗದರ್ಶಕರಾದ ಡಾ. ಸುಧೀಶ ಜೋಗಯ್ಯ ಅವರು ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button