ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಯುವಕನ ಬಲಿಪಡೇಯಿತೆ :ಮೀಟರ್ ಬಡ್ಡಿ ದಂಧೆ!

ಸಾವಿನ ಸುತ್ತ ಅಕ್ರಮ ಇಸ್ಪಿಟ್ ದಂಧೆಯ ಕರಾಳ ಛಾಯೆ!

ಧಾರವಾಡ

ಅವಳಿನಗರದಲ್ಲಿ ಹೆಚ್ಚಾಗಿರುವ ಅಕ್ರಮ ಬಡ್ಡಿ ದಂಧೆ ಹಾಗೂ ಇಸ್ಪೀಟ್ ಅಡ್ಡೆಗಳತ್ತ ಆಕರ್ಷಿತರಾಗುವ ಯುವಕರು ಇಂತಹ ಸುಳಿಗಳಿಂದ ಬರಲಾಗದೆ ಆತ್ಮಹತ್ಯೆಯಂತಹ ಕಟು ನಿರ್ಧಾರಕ್ಕೆ ಬರುತ್ತಿದ್ದಾರಾ!ಎನ್ನುವ ಅನುಮಾನ ಪ್ರಜ್ಣಾವಂತ ನಾಗರಿಕರಲ್ಲಿ ಮೂಡಿದೆ.

ಇದರ ನಿದರ್ಕಶನ ವೆಂಬಂತೆ ಕಟುಮಸ್ತಾದ ದೇಹ ಹೊಂದಿದ್ದ ಯುವಕ ಜೀವನದಲ್ಲಿ ಬಾಳಿ ಬದುಕ ಬೇಕಾಗಿತ್ತು. ಆದ್ರೆ ಅಚಾನಕ್ಕಾಗಿ ಮಾಡಿದ ಸಾಲಕ್ಕೆ ಹಿಂದುರಿಗಿಸಲಾಗದ ಪರಿಣಾಮ ಇಂದು ತನ್ನ ಜೀವವನ್ನೆ ನೆಣಿಗೆ ಸಮರ್ಪಿಸಿದ್ದಾನೆ.

ಮೃತನನ್ನು ಹೊಸ ಯಲ್ಲಾಪುರ ರಸ್ತೆಯ ಪ್ರಭಾಕರ್ ದೇಗಾಂವ್ (34) ಎಂದು ಗುರುತಿಸಲಾಗಿದೆ.
ಕೆಲಸವಿಲ್ಲದ ಕಾರಣ ಆಟೋ ನಡೆಸಿಕೊಂಡು ಕುಟುಂಬ ಜವಾಬ್ದಾರಿ ನಿಭಾಯಿಸುತ್ತಿದ್ದರು ಎನ್ನಲಾಗಿದೆ.
ನೊಂದವರ ಸಂಕಷ್ಟಕ್ಕೆ ಸ್ಪಂದಿಸುವ ಎಷ್ಟೋ ಸಹೃದಯವಂತರು ಸಹಾಯ ಸಮಾಜದಲ್ಲಿ ಇರುವಾಗಲು ಕೂಡ ಯುವಕರು ದುಡುಕಿನ ನಿರ್ಧಾರಕ್ಕೆ ಮುಂದಾಗುತ್ತಿರುವುದು ಎಂತಹ ವಿಪರ್ಯಾಸ ವಲ್ಲವೆ. ಈ ಕುರಿತು ಸಂಭಂದಪಟ್ಟ ಪೊಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು ಒಂದು ಸಣ್ಣ ತನಿಖೆ ನಡೆಸಿದರೆ ಸತ್ಯ ಹೊರಬರುವುದು ಖಚಿತ ಎನ್ನಬಹುದು.

ಪವರ್ ಸಿಟಿ ನ್ಯೂಸ್ “ಸತ್ಯ ಸದಾಕಾಲ”

Related Articles

Leave a Reply

Your email address will not be published. Required fields are marked *

Back to top button