ಸ್ಥಳೀಯ ಸುದ್ದಿಹುಬ್ಬಳ್ಳಿ

ಮೂವರು ಅಂತರ್ ಜಿಲ್ಲಾ ಮೊಬೈಲ್ ಕಳ್ಳರ ಬಂಧನ : ಜೆ ಎಮ್ ಕಾಲಿಮಿರ್ಜಿ

ಹುಬ್ಬಳ್ಳಿ

:ಅವಳಿ ನಗರದ ಮಾಲ್ ಗಳು, ಸಂತೆ ಹಾಗೂ ಜನನಿ ಬೀಡ ಪ್ರದೇಶಗಳಲ್ಲಿ ಸಾರ್ವಜನಿಕರ ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿತರಿಂದ 6 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 25 ಮೊಬೈಲ್ ಫೋನ್‌ಗಳು ಹಾಗೂ ಒಂದು ಅಟೋ ರಿಕ್ಷಾ ವಶಕ್ಕೆ ಪಡೆದುಕೊಂಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪದ ಹನುಮಂತಪ್ಪ ಬಂಡಿವಡ್ಡರ, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕುಮಾರ ಕುಳ್ಳ ಹಾಗೂ ಹುಬ್ಬಳ್ಳಿ ಜಗದೀಶ ನಗರದ ಸೋಮಶೇಖರ ಕುಂದಗೋಳ ಬಂಧಿತ ಆರೋಪಿಗಳು.

ಅವಳಿ ನಗರದ ವಿವಿಧ ಊರು, ಮಾರುಕಟ್ಟೆ ಹಾಗೂ ಸಮೀಪದ ಅಳ್ನಾವರ, ಎಂ.ಕೆ. ಹುಬ್ಬಳ್ಳಿ, ಬೆಳಗಾವಿ, ಗೋಕಾಕ, ಯರಗಟ್ಟಿ, ಕಲಬುರಗಿ, ಮೈಸೂರು, ಬಳ್ಳಾರಿ, ಸೇರಿದಂತೆ ರಾಜ್ಯದ ವಿವಿಧೆಡೆ ಸಂತೆಗಳಲ್ಲಿ ಅಮಾಯಕರ ಮೊಬೈಲ್ ಕದಿಯುತ್ತಿದ್ದರು. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪರ್ಸ್, ಮೊಬೈಲ್ ಕದಿಯುತ್ತಿದ್ದರು. ಖಚಿತ ಮಾಹಿತಿ ಕಲೆಹಾಕಿದ ಗೋಕುಲ ರೋಡ್ ಪೊಲೀಸರು ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜೆ.ಎಂ ಕಾಲಿಮಿರ್ಚಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಎಸ್‌ಐಗಳಾದ ಎಂ.ಕೆ. ಕಾಳೆ, ಸಿಬ್ಬಂದಿ ಆರ್.ಆರ್. ಹೊಂಕಣದವರ, ಇನ್ನೂ ಲಕ್ಷ್ಮಣ ನಾಯಕ್ ನೀಲಗಾರ, ಬಿ.ಎಫ್. ಬೆಳಗಾವಿ ಇತರರು ತಂಡದಲ್ಲಿದ್ದರು.

Related Articles

Leave a Reply

Your email address will not be published. Required fields are marked *

Back to top button