ಸ್ಥಳೀಯ ಸುದ್ದಿ
ಯುವಜನತೆಗೆ ಆಶಾಕಿರಣ ನಾಗರಾಜ ಗೌರಿ ಫೌಂಡೇಶನ್
ಧಾರವಾಡ
ಉದ್ಯೋಗದ ಭರವಸೆ ಇಟ್ಟುಕೊಂಡಿರುವ ಲಕ್ಷಾಂತರ ನಿರುದ್ಯೋಗಿ ಯುವಕ-ಯುವತಿಯರಿಗೆ ನಾಗರಾಜ ಗೌರಿ ಫೌಂಡೇಶನ್ ಭರವಸೆಯ ಆಶಾಕಿರಣವಾಗಿದೆ.
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಲು ವಿಕಾಸ ಕರಿಯರ್ ಅಕ್ಯಾಡೆಮಿ ಸಹಭಾಗಿತ್ವದಲ್ಲಿ ಆಫಲೈನ್ ತರಬೇತಿ ಕೊಡಲು ಶುರು ಮಾಡಿದೆ.
ಇಂದಿನಿಂದ ಅಂದ್ರೆ ಜೂನ 20 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದ್ದು, ಜುಲೈ 10 ರವರೆಗೆ ಇರಲಿದೆ.
ವಿಕಾಸ ಕರಿಯರ್ ಅಕ್ಯಾಡೆಮಿಯಲ್ಲಿ ಅರ್ಜಿಗಳು ಸಿಗಲಿವೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ತರಬೇತಿ ವೆಚ್ಚವನ್ನಿ ನಾಗರಾಜ ಗೌರಿ ಫೌಂಡೇಶನ್ ಭರಿಸಲಿದೆ.
ಯುವ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಲು ಕಾಂಗ್ರೆಸ ಯುವ ನಾಯಕ ನಾಗರಾಜ ಗೌರಿ ಮನವಿ ಮಾಡಿದ್ದಾರೆ.