ಸ್ಥಳೀಯ ಸುದ್ದಿ

ಯುವಜನೋತ್ಸವದಲ್ಲಿ ನೈರ್ಮಲ್ಯಕ್ಕೆ ಆದ್ಯತೆ ನೀಡಿ- ಶಾಸಕ ಅರವಿಂದ ಬೆಲ್ಲದ

ಧಾರವಾಡ

ದೇಶದ ವಿವಿಧ ರಾಜ್ಯಗಳಿಂದ ಸಾಂಸ್ಕೃತಿಕ ರಾಯಭಾರಿಗಳು ನಮ್ಮ ಜಿಲ್ಲೆಗೆ ಆಗಮಿಸುವದರಿಂದ ಯುವಜನೋತ್ಸವದಲ್ಲಿ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಸ್ವಚ್ವ ಕುಡಿಯುವ ನೀರು, ಅತಿಥಿಗಳಿಗೆ ಮತ್ತು ಗಣ್ಯರಿಗೆ, ಸಾರ್ವಜನಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಬೇಕು. ಯಾವುದೇ ಗೊಂದಲ, ಗದ್ದಲಕ್ಕೆ ಅವಕಾಶವಾಗದಂತೆ ಶಿಸ್ತಿನಿಂದ ನಿರ್ವಹಿಸಲು ಅಗತ್ಯ ಸಿಬ್ಬಂದಿ, ಸ್ವಯಂ ಸೇವಕರನ್ನು ನೇಮಿಸಬೇಕೆಂದು ಶಾಸಕರು ಹೇಳಿದರು.

ಅವರು ಇಂದು ಸಂಜೆ ಮುಖ್ಯ ವೇದಿಕೆ ನಿರ್ಮಾಣದ ಕೆಸಿಡಿ ಮೈದಾನ ವೀಕ್ಷಿಸಿದ ನಂತರ ಯುವಜನೋತ್ಸವ ಸಮಿತಿಗಳ ಸದಸ್ಯರೊಂದಿಗೆ ಕೆಸಿಡಿ ಪ್ಯಾರನ್ ಹಾಲ್ ದಲ್ಲಿ ಸಭೆ ಜರುಗಿಸಿ, ಮಾತನಾಡಿದರು.

ನಗರದ ಅಂದ, ಸೌಂದರ್ಯ ಹೆಚ್ಚಿಸಲು ಪ್ರಮುಖ ರಸ್ತೆ ಮತ್ತು ಸ್ಥಳಗಳಲ್ಲಿನ ಗೋಡೆ, ಸರ್ಕಲ್ ಗಳಲ್ಲಿ ಕನ್ನಡನಾಡಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ, ನಾಯಕರ, ಸ್ವಾತಂತ್ರ್ಯ ಹೊರಾಟಗಾರ ಚಿತ್ರಗಳನ್ನು ವಿಶೇಷವಾಗಿ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವಂತೆ ಚಿತ್ರಗಳನ್ಬು ಬಿಡಿಸಬೇಕು ಎಂದು ಅವರು ತಿಳಿಸಿದರು.

ಯುವ ಕಲಾವಿದರು ಕಲೆಗಳನ್ನು ಪ್ರದರ್ಶಿಸುವ ವೇದಿಕೆ ಗಳು, ಧ್ವನಿವರ್ಧಕ ವ್ಯವಸ್ಥೆ ಸರಿಯಾಗಿರಬೇಕು. ಕಲಾವಿದರಿಂದ ಯಾವುದೇ ದೂರುಗಳ ಬರದಂತೆ ಅವರ ಬೇಡಿಕೆಗೆ ಅನುಗುಣವಾಗಿ ನಿರ್ಮಿಸಬೇಕು ಎಂದು ಶಾಸಕರು ಸೂಚಿಸಿದರು.

ಅವಳಿ ನಗರದ ಎಲ್ಲ ವಿದ್ಯುತ್ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುವ ಬಗ್ಗೆ ಪಾಲಿಕೆ ಅಧಿಕಾರಿಗಳು ಪರಶೀಲಿಸಿ, ಅಗತ್ಯವಿದ್ದಲ್ಲಿ ದುರಸ್ತಿ, ಹೊಸ ಲೈಟ್ ಜೋಡಣೆ ಮಾಡಬೇಕು. ಹೆಸ್ಕಾಂ ದವರು ಉತ್ತಮ ರೀತಿಯಲ್ಲಿ ನಗರದ ಪ್ರಮುಖ ರಸ್ತೆ, ಸರಕಾರಿ ಕಟ್ಟಡಗಳನ್ನು ದೀಪಾಲಂಕಾರ ಮಾಡಬೇಕೆಂದು ಶಾಸಕ ಅರವಿಂದ ತಿಳಿಸಿದರು.

ಅತಿಥಿಗಳ ಆರೋಗ್ಯ ಕಾಳಜಿಯು ಮುಖ್ಯ. ಯುವ ಕಲಾವಿದರು, ಸ್ಪರ್ಧಾಳುಗಳು ಉಳಿದುಕೊಳ್ಳುವ ಮತ್ತು ಅವರ ಕಲಾ ಪ್ರದರ್ಶನದ ಸ್ಪರ್ಧಾ ಸ್ಥಳಗಳಲ್ಲಿ ಆರೋಗ್ಯ ಕಾರ್ಯಕರ್ತರನ್ನು , ಹಿರಿಯ ಆರೋಗ್ಯ ಸೇವಕರನ್ನು, ಆಶಾ ಕಾರ್ಯಕರ್ತರನ್ನು ನೇಮಿಸಬೇಕು. ಅಗತ್ಯವಿದ್ದಲ್ಲಿ ತಕ್ಷಣ ಸ್ಪಂದಿಸಿ, ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ಕವಿವಿ ಕುಲಸಚಿವ ಯಶಪಾಲ್ ಕ್ಷೀರಸಾಗರ ಅವರು ರಾಷ್ಟ್ರೀಯ ಯುವಜನೋತ್ಸವ ಆಯೋಜನೆಯ ರೂಪುರೇಷೆಗಳನ್ನು ಮತ್ತುವಿವಿಧ ಸಮಿತಿಗಳ ಕಾರ್ಯ ಚಟುವಟಿಕೆಗಳನ್ನು ಶಾಸಕರಿಗೆ ವಿವರಿಸಿದರು.

ಸಭೆಯಲ್ಲಿ ಕರ್ನಾಟಕ ವಿಜ್ಞಾನ ಮತ್ತು ಕಲಾ ಕಾಲೇಜು ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ, ಡಾ.ಶಿವಾನಂದ ಚೌಗಲಾ, ಆಹಾರ ಮತ್ತು ಯುವಕೃತಿ, ಪ್ರದರ್ಶನ ಮಳಿಗೆ ಸಮಿತಿ ಮುಖ್ಯಸ್ಥ ಡಾ.ಭೀಮಪ್ಪ ಎಂ.ಎನ್, ಭದ್ರತಾ ಸಮಿತಿಯ ಎಸಿಪಿ ವಿಜಯಕುನಾರ ಟಿ., ಸಂಚಾರಿ ಇನ್ಸ್ಪೆಕ್ಟರ್ ಮಲ್ಲನಗೌಡ ನಾಯ್ಕ್, ಆಹಾರ ಸಮಿತಿಯ ವಿನೋದಕುಮಾರ ಹೆಗ್ಗಳಗಿ, ಆರೋಗ್ಯ ಸಮಿತಿ ಮುಖ್ಯಸ್ಥೆ ಡಾ.ಪಾಟೀಲ ಶಶಿ, ಮಹಿಳಾ ಸಮಿತಿಯ ಆರ್.ಟಿ.ಪೋಳ, ಸಾಂಸ್ಕೃತಿಕ ಸಮಿತಿಯ ಕುಮಾರ ಬೆಕ್ಕೇರಿ, ಸಮಾರಂಭ ಆಯೋಜನೆ ಸಮಿತಿಯ ಇಂಜನಿಯರ್ ಸುರೇಶ ಗೌಡರ, ನೋಂದಣಿ ಸಮಿತಿಯ ಗಿರೀಶ ಪದಕಿ, ಯೋಗಾಥಾನ ಸಮಿತಿಯ ಡಾ. ಮಹಾದೇವಪ್ಪ ದಳವಾಯಿ, ಇವೇಂಟ್ ಮತ್ತು ಪೋಕ್ ಸಮಿತಿ ಸದಸ್ಯರು, ಸಾಹಸ ಕ್ರೀಡೆಗಳ ಆಯೋಜನೆ ಸಮಿತಿ ಸದಸ್ಯರು ಸಭೆಯಲ್ಲಿ ತಮ್ಮ ಸಮಿತಿಯ ಕಾರ್ಯಗಳನ್ನು ವಿವರಿಸಿದರು.

Related Articles

Leave a Reply

Your email address will not be published. Required fields are marked *

Back to top button