ರಹೀಮ ಬೇಪಾರಿಯಿಂದ ಅದ್ದೂರಿ ಹನುಮ ಜಯಂತಿ ಆಚರಣೆ!
ಹುಬ್ಬಳ್ಳಿ
ಕೇಸರಿ ನಂದನ, ವಾಯುಪುತ್ರ, ಚಿರಂಜೀವಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಹನುಮ, ಭಕ್ತರ ಪಾಲಿನ ಆಪತ್ಬಾಂಧವ. ಶ್ರೀರಾಮನ ಪರಮ ಭಕ್ತ ಆಂಜನೇಯನನ್ನು ಶಿವನ ಅವತಾರವೆಂದು ಶಿವ ಪುರಾಣಗಳಲ್ಲಿ ಹೇಳಲಾಗಿದೆ.
ಆದ್ರೆ ಜಾತಿ, ಮೇಲೂ ಕೀಳು ಎನ್ನುವ ರಾಜಕೀಯ ನಡೆಯುತ್ತಿರುವ ಬೆನ್ನಲ್ಲೇ ಕೇಶ್ವಾಪೂರದ ಕೆರಿಓಣಿಯ ನಿವಾಸಿ ರಹೀಮ್ ಬೇಪಾರಿ ಇಂದು ಹನುಮ ಜಯಂತಿಯ ಪ್ರಯುಕ್ತವಾಗಿ ನಾಗಶೆಟ್ಟಿ ಕೊಪ್ಪದ ಶ್ರೀ ಹನುಮಾನ ದೇವಾಸ್ಥಾನಕ್ಕೆ ಭಕ್ತಿ ಪೂರ್ವಕ ವಾಗಿ 21,ಮತ್ತು11,ಅಡಿ ಎತ್ತರದ ಎರಡು ಹೂ ಮಾಲೆ ದೊಡ್ಡ ಗಾತ್ರದ ಹೂ ಮಾಲೆಗಳು ಹಾಗೂ ಹಣ್ಣು,ಹಂಪಲುಗಳನ್ನು ದೇವರಿಗೆ ನೈವೇದ್ಯ ನೀಡಿ ಆಂಜನೇಯನ ಭಕ್ತಿಗೆ ಪಾತ್ರರಾದರು.
ಪ್ರತಿ ವರ್ಷವೂ ಹನುಮಜಯಂತಿ ಬಂದರೆ ಸಾಕು ರಹೀಮ್ ಬೇಪಾರಿ ಸುತ್ತ ಮುತ್ತಲಿನ ಹನುಮ ಭಕ್ತರ ಗಮನ ಸೆಳೆಯುವಂತೆ ಆಚರಿಸ್ತಾರೆ.ರಹೀಮ್ ಬೇಪಾರಿ ಎಂದರೆ ನಗರದ ರಮೇಶ ಭವನ, ಬೆಂಗೇರಿ, ಶಾಂತಿನಗರ, ಗೋಪನಕೋಪ್ಪದ ಎಲ್ಲ ಬಡಾವಣೆಗಳ ಜನರಿಗೆ ಚಿರಪರಚಿತರು.ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ದುಡಿಯುತ್ತಿರುವ ಇವರು ಈದಿನ ಎಲ್ಲರಿಗೂ ಮಾದರಿ ಮುಸ್ಲಿಂ ವ್ಯಕ್ತಿಯ ನಡೆ ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಪಕ್ಷ,ಜಾತಿ ಗಳನ್ನು ಮರೆತು ಇವರಿಗೆ ಸಾಥ್ ನಿಡುವ ಸ್ನೇಹಿತರಾದ ಪ್ರಕಾಶ್ ಕೂಡ ಸಮಾಜ ಸೇವೆಯಲ್ಲಿ ಒಂದು ಕೈ ಮುಂದೆಯೆ ಸರಿ ಎನ್ನಬಹುದು.