ಸ್ಥಳೀಯ ಸುದ್ದಿ

ರಾಜಕೀಯ ಚಟುವಟಿಕೆಗೆ ಬ್ರೇಕ್ ಹಾಕಿದ ಗ್ರಾಮಸ್ಥರು.

ಧಾರವಾಡ

ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದಲ್ಲಿ ಕರೆಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಮೇ 2 ರವರೆಗೆ ಊರಿನಲ್ಲಿ ಯಾವುದೇ ರಾಜಕೀಯ ಚಟುವಟಿಕಗಳ ಪ್ರಚಾರವನ್ನು ಮಾಡುವಂತಿಲ್ಲ.

ಶತಮಾನಗಳ ಇತಿಹಾಸವುಳ್ಳ ಒಂಬತ್ತು ದಿನಗಳ ಕಾಲ ನಡೆಯುವ ಶ್ರೀ ಕರೇಮ್ಮದೇವಿಯ ಜಾತ್ರೆಯು 23 ವರ್ಷಗಳ ಹಿಂದೆ ನಡೆದಿತ್ತು.

2000 ನೇ ಇಸ್ವಿಯಲ್ಲಿ ನಡೆದ ಜಾತ್ರೆಗೆ ಈಗ 23 ವರ್ಷಗಳ ನಂತರ ನಡೆಯುತ್ತಿದೆ.

ಈ ವಿಶೇಷ ಜಾತ್ರೆಯಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿಷೇಧ ಮಾಡಲಾಗಿದೆ.

ಊರಿನ ಪ್ರಮುಖ ಬೀದಿಗಳಲ್ಲಿ ಡೊಳ್ಳು. ಕರಡಿ ಮಜಲು. ಹೀಗೆ ಹಲವಾರು ವಾದ್ಯಗಳಿಂದ ಮೊದಲಾಗಿ ಕುಂಬ ಮೇಳದಲ್ಲಿ ನೂರಾರು ಸುಮಂಗಲೆಯರು ಮೊದಲು ಮಾಡಿ ಯುವಕರ ಉತ್ಸಾಹದೊಂದಿಗೆ ಅದ್ದೂರಿಯಾಗಿ ನೆರವೇರಿತು.

ಕುರುಬಗಟ್ಟಿಯು ಸಂಪೂರ್ಣ ಭಂಡಾರದಲ್ಲಿ ಮುಳಿಗಿ ಹೋಗಿದೆ. ಭಕ್ತರ ಉಧೋ ಉಧೋ ಘೋಷ ಮುಗಿಲುಮುಟ್ಟಿತು ಊರಿನ ಹೆಣ್ಣು ಮಕ್ಕಳೆಲ್ಲರೂ ತಾಯಿಗೆ ಉಡಿ ತುಂಬುಲು ಜಾತ್ರೆಗೆ ಬರುತ್ತಿದ್ದಾರೆ.

ಕರೇಮ್ಮದೇವಿ ಜಾತ್ರಾ ಕಮೀಟಿಯಿಂದ ಒಂಬತ್ತು ದಿನವು ಮುಂಜಾನೆ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಒಂಬತ್ತು ದಿನಗಳ ಕಾಲ ಯಾವ ಮನೆಯಲ್ಲಿಯೂ ಅಡುಗೆ ಮಾಡುವಂತಿಲ್ಲ ಎಂದೂ ಡಂಗುರ ಸಾರಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಒಟ್ಟಿನಲ್ಲಿ ಕುರುಬಗಟ್ಟಿ ಆಂಜನೇಯ ಸ್ವಾಮಿಯ ರಥೋತ್ಸವ ಮುಗಿದ 20 ದಿನದಲ್ಲಿ ಈ ಜಾತ್ರೆಗೆ ಗ್ರಾಮಸ್ಥರು ಸಜ್ಜಾಗಿ ಅದ್ಧೂರಿಯಾಗಿ ಜಾತ್ರೆ ಆಚರಣೆ ಮಾಡುತ್ತಿದ್ದಾರೆ.

ಒಂಬತ್ತು ದಿನಗಳು ಒಂಬತ್ತು ಸ್ವಾಮಿಜಿಗಳು ಪ್ರವಚನ ನೀಡಿ ಆಶೀರ್ವಾದ ಮಾಡಲಿದ್ದಾರೆ.

ಭಜನೆ ಜೋತೆಗೆ ಚಿನ್ನು ಮೆಲೋಡಿಸ್ ತಂಡ ಸಾ// ಕುರುಬಗಟ್ಟಿ ಅವರಿಂದ ದಿನಾಂಕ 02-05-2023 ರಂದು ರಸಮಂಜರಿ ಕಾರ್ಯಕ್ರಮವು ಕೂಡಾ ಜರುಗುತ್ತವೆ. ಹಲವಾರು ಕಾರ್ಯಕ್ರಮಗಳು ಈ ಜಾತ್ರೆಯಲ್ಲಿವೆ.

Related Articles

Leave a Reply

Your email address will not be published. Required fields are marked *

Back to top button