ಸ್ಥಳೀಯ ಸುದ್ದಿ

ರಾಜ್ಯದಲ್ಲಿ ಸಂಚಲನ ಮೂಡಿಸಿದೆ ಶಾಸಕನ ಆಡಿಯೋ

ಬೆಂಗಳೂರು

ರಾಜ್ಯದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಪಿಎಸ್ಐ ಹಗರಣ ದೇಶದ ಗಮನ ಸೆಳೆದಿದ್ದು, ದಿನದಿಂದ ದಿನಕ್ಕೆ ಪ್ರಕರಣದಲ್ಲಿ ತನಿಖಾ ತಂಡ ಹಲವಾರು ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದೆ.

ಇದೀಗ ಇಂತಹದೊಂದು ತನಿಖೆ ನಡೆಯುತ್ತಿರುವಾಗಲೇ ತಮ್ಮ ಮಗನಿಗೆ ಪಿಎಸ್ಐ ಮಾಡಲು ಪರಸಪ್ಪ ಎನ್ನುವರು ಶಾಸಕರಿಗೆ 15 ಲಕ್ಷ ಕೊಟ್ಟಿದ್ದಾರೆ ಎನ್ನುವ ಆಡಿಯೋದ ತುಣುಕು ವೈರಲ್ ಆಗಿದೆ.

ಈ ಬಗ್ಗೆ ಶಾಸಕ ಬಸವರಾಡ ದಡ್ಡೆಸೂಗೂರು ಮಾತನಾಡಿ, ಪ್ರಕರಣದಲ್ಲಿ ನನ್ನದೇನೂ ಪಾತ್ರವೂ ಇಲ್ಲಾ. ಎಲ್ಲವೂ ವಿರೋಧಿಗಳ ಕೈವಾಡ ಅಂತೀದಾರೆ.

ಇದೆಲ್ಲಾ ಪ್ರಕರಣವನ್ನು ನೋಡಿಕೊಂಡು ಸುಮ್ಮನಾಗದೇ ಇರುವ ಮಾಜಿ ಸಚಿವ ಸಚಿವ ಶಿವರಾಜ ತಂಗಡಗಿ ಶಾಸಕನ ಬಗ್ಗೆ ತನಿಖೆಯಾಗಿ ಅರೆಸ್ಟ ಮಾಡುವವರೆಗೂ ಹೋರಾಟ ನಿಲ್ಲೋಸೊಲ್ಲಾ ಅಂತಿದಾರೆ.

ಒಟ್ಟಾರೆ ಪ್ರಕರಣ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕನ ರಾಜಕೀಯ ಕಿತ್ತಾಟ ಜೋರಾಗಿಯೇ ಸದ್ದು ಮಾಡುತ್ತಿದೆ.

ಪವರ್ ಸಿಟಿ‌ನ್ಯೂಸ್ ಕನ್ನಡ
ಇದು ಸತ್ಯ ಸದಾಕಾಲ

Related Articles

Leave a Reply

Your email address will not be published. Required fields are marked *

Back to top button