ರಾಷ್ಟ್ರಕ್ಕೆ ವಿವಿಧ ಯೋಜನೆಗಳ ಸಮರ್ಪಣೆ ಹಾಗೂ ಶಂಕುಸ್ಥಾಪನೆ ನೇರವೇರಿಸಿದ ಪ್ರಧಾನಿಮೋದಿ
ಧಾರವಾಡ
ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡ ಜಿಲ್ಲೆಗೆ ಆಗಮಿಸಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ರು. ಯೋಜನೆಗಳ ಬಗ್ಗೆ ಮಾಹಿತಿನೋಡುವುದಾದ್ರೆ
ಧಾರವಾಡ ಐಐಟಿ
410 ಎಕರೆ ವಿಸ್ತೀರ್ಣದ ವಿಶಾಲ ನಿವೇಶನದಲ್ಲಿ ,852 ಕೋಟಿ ರೂ.ಯೋಜನಾ ವೆಚ್ಚದಲ್ಲಿ ಸ್ಥಾಪನೆಯಾಗಿರುವ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮೊದಲ ಹಂತದ ಕಟ್ಟಡದ ಉದ್ಘಾಟನೆ.
ಪ್ರಸ್ತುತ ಈ ಸಂಸ್ಥೆಯಲ್ಲಿ 73 ಬೋಧಕರು,35 ಸಿಬ್ಬಂದಿ ಹಾಗೂ 856 ವಿದ್ಯಾರ್ಥಿಗಳಿದ್ದಾರೆ.
ಬಿ-ಟೆಕ್,ಬಿ.ಎಸ್,ಎಂ ಎಸ್,ಎಂ ಟೆಕ್ ಹಾಗೂ ಪಿಹೆಚ್‌ಡಿ ಪದವಿಗಳು ಲಭ್ಯ.
ವಿಶ್ವದ ಅತಿ ಉದ್ದನೆಯ ರೈಲ್ವೇ ಪ್ಲಾಟ್ ಫಾರ್ಮ್
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲ್ವೇ ನಿಲ್ದಾಣದಲ್ಲಿ 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಪಾದಚಾರಿ ಕೆಳಸೇತುವೆ ಹಾಗೂ 1507 ಮೀ.ಉದ್ದದ ವಿಶ್ವದ ಅತಿ ಉದ್ದನೆಯ ರೈಲ್ವೇ ಪ್ಲಾಟ್ ಫಾರ್ಮ್ ಉದ್ಘಾಟನೆ.
ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದೀಕರಣ
ವಿಜಯನಗರ,ಕೊಪ್ಪಳ,ಗದಗ ,ಧಾರವಾಡ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಮೂಲಕ ಹಾಯ್ದು ಹೋಗುವ 245 ರೈಲ್ವೇ ಕಿ.ಮೀ.ಉದ್ದದ ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದೀಕರಣ ಕಾಮಗಾರಿ 519 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಂಡಿದೆ.
ಉನ್ನತೀಕರಣಗೊಂಡ ಹೊಸಪೇಟೆ ರೈಲು ನಿಲ್ದಾಣ
13 ಕೋಟಿ ರೂ.ವೆಚ್ಚದಲ್ಲಿ ಉನ್ನತೀಕರಣಗೊಂಡಿರುವ ಹೊಸಪೇಟೆ ರೈಲ್ವೇ ನಿಲ್ದಾಣ ಲೋಕಾರ್ಪಣೆ.
353 ಕೋಟಿ ರೂ.ಗಳ ಸ್ಮಾರ್ಟ್ ಸಿಟಿ ಯೋಜನೆಗಳು
ನಾಗರಿಕರ ಜೀವನ ಮಟ್ಟ ಸುಧಾರಣೆಗೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 353 ಕೋಟಿ ರೂ.ವೆಚ್ಚದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ.
ಶಂಕುಸ್ಥಾಪನೆಗೊಂಡ ಕಾರ್ಯಕ್ರಮಗಳು
ಜಲಜೀವನ ಮಿಷನ್ ಬಹುಗ್ರಾಮ ಕುಡಿಯುವ ನೀರು ಯೋಜನೆ
1042 ಕೋಟಿ ರೂ.ವೆಚ್ಚದಲ್ಲಿ,
86 ಎಂಎಲ್‌ಡಿ ನೀರು ಸಂಸ್ಕರಣಾ ಘಟಕ ನಿರ್ಮಾಣ.ಮಲಪ್ರಭಾ ನದಿಯ ರೇಣುಕಾಸಾಗರ ಜಲಾಶಯದಿಂದ 2 ಲಕ್ಷ ಮನೆಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರು ಸರಬರಾಜು.
ಜಿಲ್ಲೆಯ 396 ಗ್ರಾಮೀಣ ವಸತಿ ಪ್ರದೇಶಗಳು ಹಾಗೂ ಒಂದು ಪಟ್ಟಣಕ್ಕೆ ಸುಸ್ಥಿರ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಶಂಕುಸ್ಥಾಪನೆ .
ಕ್ರೀಡಾ ಸಂಕೀರ್ಣ
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 166 ಕೋಟಿ ರೂ.ವೆಚ್ಚದಲ್ಲಿ ಕ್ರೀಡಾ ಸಂಕೀರ್ಣಕ್ಕೆ ಶಂಕುಸ್ಥಾಪನೆ.
ಜಯದೇವ ಹೃದ್ರೋಗಗಳ ಆಸ್ಪತ್ರೆ
ಹುಬ್ಬಳ್ಳಿಯ ರಾಯನಾಳ ಬಳಿ 11.36 ಎಕರೆ ಪ್ರದೇಶದಲ್ಲಿ,250 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗಗಳ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ.
ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಯೋಜನೆ
150 ಕೋಟಿ ರೂ.ವೆಚ್ಚದಲ್ಲಿ ತುಪ್ಪರಿಹಳ್ಳ ಪ್ರವಾಹ ಹಾನಿ ತಡೆಯಲು, ಆಯ್ದ ಭಾಗಗಳಲ್ಲಿ ತಡೆಗೋಡೆ ಹಾಗೂ ವಡ್ಡುಗಳನ್ನು ನಿರ್ಮಾಣಕ್ಕೆ ಚಾಲನೆ ಪ್ರಧಾನಿಯವರು ವೇದಿಕೆಯ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.