ಸ್ಥಳೀಯ ಸುದ್ದಿ

ಲಿಂಗಾಯತ ಸಮುದಾಯದ ಬಾಂದವರು ಈ ಬಾರಿ ಜಿ.ಎಸ.ಪಾಟೀಲರಿಗೆ ಬೆಂಬೆಲಿಸಿ: ಮಾಜಿ‌ ಮುಖ್ಯಮಂತ್ರಿ ಜಗದೀಶ ಶೆಟ್ಟರ.

ಗಜೇಂದ್ರಗಡ:: ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳಿಸಿದವರಿಗೆ ಅವಮಾನ ಮಾಡಿದ್ದಕ್ಕಾಗಿ ನಾನು ಬಿಜೆಪಿ ತೊರೆದು ಕೈ ಹಿಡಿಯಬೇಕಾಯಿತು. ನನ್ನ ಬೆಳವಣಿಗೆ ಸಹಿಸದ ಕೆಲವು ಬಿಜೆಪಿಗರಿಂದ ನನ್ನನ್ನು ತುಳಿಯುವ ಪ್ರಯತ್ನ ನಡೆಯಿತು. ಅತ್ಯಂತ ಭ್ರಷ್ಟ, ಕ್ರಿಮಿನಲ್, ಸಿಡಿ ಪ್ರಕರಣ ಹೊಂದಿದವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟ ಬಿಜೆಪಿಗೆ ಬುದ್ದಿ ಕಲಿಸಲು ನಾನು ಸ್ಪರ್ಧೆಗಿಳಿದಿದ್ದೇನೆ.ನಮ್ಮ ಸುಮುದಾಯದವರು ಈ ಬಾರಿ ಜಿ.ಎಸ್.ಪಾಟೀಲರನ್ನು ಬೆಂಬಲಿಸುವ ಮೂಲಕ ಜಯಕ್ಕೆ ಮತ್ತೊಂದು ಮೆಟ್ಟಿಲು ಆಗೋಣ ಎಂದು ಮಾಜಿ ಮುಖ್ಯಮಂತ್ರಿ ‌ಜಗದೀಶ ಶೆಟ್ಟರ ಹೇಳಿದರು.

ನಗರದ ಎ.ಪಿ.ಎಮ್.ಸಿ.ಎದುರಿನ ಬಯಲು ಜಾಗದಲ್ಲಿ ನಡೆದ ರೋಣ‌ ರೋಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಪರ ಮತಯಾಚನೆ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿಯಲ್ಲಿ ತತ್ವ ಸಿದ್ದಾಂತಗಳು ಮೂಲೆಗುಂಪಾಗಿವೆ.ಸ್ವಾಭಿಮಾನ ಮರೆತವನು ಗುಲಾಮನಾಗುತ್ತಾನೆ ಎಂಬ ದೃಷ್ಟಿಕೋನದಿಂದ ಕಾಂಗ್ರೇಸ್ ಸೇರಿದ್ದೇನೇ. ಗ್ಯಾರಂಟಿ ಕಾರ್ಡ್ನಲ್ಲಿ ಕೊಟ್ಟಿರುವ ಹಾಗೆ ಉಚಿತ ವಿದ್ಯುತ್, ಪ್ರತಿ ಮನೆಯ ಮಹಿಳೆಯೊಬ್ಬರಿಗೆ 2ಸಾವಿರ, ಪದವೀಧರರಿಗೆ 3 ಸಾವಿರ ರೂಪಾಯಿ, ಅಂಗನವಾಡಿ ಕಾರ್ಯಕರ್ತರ ಸಂಬಳ ಹೆಚ್ಚಳ, ಹತ್ತು ಹಲವು ಯೋಜನೆಗಳನ್ನು ಕಾಂಗ್ರೇಸ್ ಈಡೇರಿಸುವ ಗುರಿ ಹೊಂದಿದೆ. ಲಿಂಗಾಯತ ಸಮುದಾಯದ ಎಲ್ಲರೂ ಜಾತ್ಯತೀತ ವ್ಯಕ್ತಿ ಜಿ. ಎಸ್. ಪಾಟೀಲರಿಗೆ ಮತ ನೀಡಿ ಗೆಲ್ಲಿಸಿ ಎಂದರು.

ಬಳಿಕ ಕಾಂಗ್ರೇಸ್ ಪಕ್ಷದ ಮುಖಂಡ ಸಿದ್ದಣ್ಣ ಬಂಡಿ ಮಾತನಾಡಿ.ಎಲ್ಲರನ್ನು ಗೌರವಯುತವಾಗಿ ಕಾಣುವ ವ್ಯಕ್ತಿ ಕಾಲಕಾಲೇಶ್ವರ ಮತ್ತು ಜಗದೀಶ್ವರರ ಆಶೀರ್ವಾದದೊಂದಿಗೆ 25 ಸಾವಿರ ಲೀಡ್ ನಲ್ಲಿ ಜಿ. ಎಸ್.ಪಾಟೀಲರ ಗೆಲುವು ಪಕ್ಕಾ ಎಂದರು. ಬಹಿರಂಗ ಸಭೆಯಲ್ಲಿ ಮಾಜಿ ಸಂಸದ ಆರ್. ಎಸ್. ಪಾಟೀಲ್, ಐ. ಎಸ್. ಪಾಟೀಲ, ಪ್ರಶಾಂತ ಪಾಟೀಲ,ಮಿಥುನ ಪಾಟೀಲ,ವೀರಣ್ಣ ಶೆಟ್ಟರ, ಮಂಜುಳಾ ಹುಲ್ಲಣ್ಣನವರ, ಮಂಜುಳಾ‌ ರೇವಡಿ, ನೀಲಮ್ಮ ಬಳೂಟಗಿ, ಅನ್ನಪೂರ್ಣ ಪಾಟೀಲ ಅಶೋಕ ಭಾಗಮಾರ, ನ್ಯಾಯವಾದಿ ವಿ.ಆರ್.ಗುಡಿಸಾಗರ ,ವಿ.ಬಿ. ಸೊಮ್ಮನಕಟ್ಟಿಮಠ, ಸಿದ್ದಣ್ಣ ಬಂಡಿ,ವೀರಣ್ಣ ಶಟ್ಟರ,ಶಿವರಾಜ ಘೋರ್ಪಡೆ, ಶ್ರೀಧರ ಬಿದರಳ್ಳಿ, ರಾಜೂ ಸಾಂಗ್ಲಿಕರ್, ಪರಶುರಾಮ ಅಳಗವಾಡಿ, ಯಲ್ಲಪ್ಪ ಬಂಕದ, ಶ್ರೀಕಾಂತ ಅವಧೂತ, ರಫೀಕ ತೋರಗಲ್,ವಿಶ್ವನಾಥ ಜಿಡ್ಡಿಬಾಗಿಲ, ಎಚ್.ಎಸ್.ಸೊಂಪೂರ, ಎ.ಡಿ.ಕೋಲಕಾರ, ಚನ್ನಬಸಪ್ಪ ಮೇಟಿ, ಶರಣು ಪೂಜಾರ, ಪ್ರಭು ಚವಡಿ, ಮುರ್ತುಜಾ‌ ಡಾಲಾಯತ,ಸುಭಾನಸಾಬ ಆರಗಿದ್ದಿ, ಬಸವರಾಜ ಚನ್ನಿ, ರೀಯಾಜ್ ವಂಟಿ, ಬಾಷಾಸಾಬ ಮುದಗಲ್, ಪ್ರಶಾಂತ ರಾಠೋಡ, ಮುತ್ತಣ್ಣ ಮ್ಯಾಗೇರಿ, ಹಸನಸಾಬ ತಟಗಾರ, ಇಮ್ರಾನ ಅತ್ತಾರ, ಶಶಿಧರ ಹೂಗಾರ, ಶಶಿಧರ ವಕ್ಕಲರ,ಶಿವು ಚವ್ಹಾಣ, ಉಮೇಶ ರಾಠೋಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button