ಸ್ಥಳೀಯ ಸುದ್ದಿ
ವಕೀಲೆ ಜೋತೆಗೆ ಅಸಭ್ಯ ವರ್ತನೆ- CPIಗೆ ಕಾನೂನು ಸಂಕಷ್ಟ.
ಧಾರವಾಡ
ಪೊಲೀಸ್ ಠಾಣೆಗೆ ಬಂದ ವಕೀಲೆಗೆ ಪ್ಲಾಯಿಂಗ್ ಕಿಸ್ ಕೊಟ್ಟು ಇನ್ಸಪೇಕ್ಟರ್ ಒಬ್ಬರು ಇದೀಗ ಕಾನೂನಿನ ಸಂಕಷ್ಟಕ್ಕೆ ಈಡಾಗಿದ್ದಾರೆ.
ಸಖಿ ಒನ್ ಸ್ಟಾಫ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ವಕೀಲೆಗೆ ಈ ರೀತಿ ಇನ್ಸಪೇಕ್ಟರ್ ನಡೆದುಕೊಂಡಿದ್ದು,
ಸಿಪಿಐ ಅಮಾನತ್ತಿಗೆ ವಕೀಲರಿಂದ ಪ್ರತಿಭಟನೆ ಹೋರಾಟ ನಡೆದಿದೆ.
ಮಹಿಳಾ ವಕೀಲೆ ಜೋತೆಗೆ ಪೊಲೀಸ್ ಇನ್ಸಪೇಕ್ಟರ್ ಅನುಚಿತವಾಗಿ ವರ್ತನೆ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ಸಿಪಿಐ ಮಂಜುನಾಥ ಕುಸುಗಲ್ ಅಮಾನತ್ತಿಗಾಗಿ ವಕೀಲರು ಧಾರವಾಡದ ಜ್ಯೂಬಲಿ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ರು.
ಸಿಪಿಐ ವಿರುದ್ದ ಎಸ್ಪಿಗೆ ದೂರು ಸಲ್ಲಿಸಿದ ವಕೀಲರ ಸಂಘದ ಪದಾಧಿಕಾರಿಗಳು, ಕೂಡಲೇ ಅಮಾನತ್ತು ಮಾಡುವಂತೆ ಒತ್ತಾಯ ಕೂಡ ಮಾಡಿದ್ರು.
ಸಿಪಿಐ ಅಮಾನತ್ತು ಮಾಡದೇ ಹೋದ್ರೆ ಉಗ್ರ ಹೋರಾಟ ಮಾಡಲಾಗುವುದು ಎಂದು ವಕೀಲರು ಎಚ್ಚರಿಕೆ ಕೊಟ್ಟಿದ್ದಾರೆ.