ಸ್ಥಳೀಯ ಸುದ್ದಿ
ವಿಜಯಪೂರದ ಸಂಗಾಪೂರದಲ್ಲಿ ಸಂಭ್ರಮದ ಜಾತ್ರಾ ಮಹೋತ್ಸವ
ವಿಜಯಪೂರ
ವಿಜಯಪೂರ ಜಿಲ್ಲೆಯಲ್ಲಿ ಸಂಗಾಪೂರ ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿ ಮಠದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಿದ್ಧಲಿಂಗೇಶ್ವರ ರಥೋತ್ಸವ ಮತ್ತು ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಹಾಗೂ ಶ್ರೀ ತಿಮ್ಮಜ್ಜನವರ ಪುಣ್ಯಾರಾಧನೆ ಸಂಭ್ರಮದಿಂದ ನಡೆಯಿತು.
ಮಠದ ಶ್ರೀಗಳಾದ ಶ್ರೀ ಅಬಿನವ ಸಿದ್ಧಲಿಂಗ ಮಹಾಸ್ವಾಮೀಜಿ ಜಾತ್ರೆಗೆ ಚಾಲನೆ ಕೊಟ್ಟರು.
ಈ ಜಾತ್ರೆಯಲ್ಲಿ ದೂರದ ಊರುಗಳಿಂದ ಹಾಗೂ ಹೊರ ರಾಜ್ಯದ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡಿದ್ದರು.
ಒಂದು ವಾರಗಳ ಜಾತ್ರೆಯ ಸಂಭ್ರಮ ಸಂಗಾಪೂರ ಗ್ರಾಮದಲ್ಲಿ ಕಂಡು ಬಂತು.