ವಿಜಯ್ ಹೋರಾಟಕ್ಕೆ ಫಲಿಸಿದ ಫಲ:ಆತಂಕದಲ್ಲಿ ಕಿಂಗ್ಸ್ ಸೆಕ್ಯೂರಿಟಿ!
Powercity news:ಹುಬ್ಬಳ್ಳಿ
ಸಫಾಯಿ ಕರ್ಮಚಾರಿಗಳನ್ನು ಮರು ಕರ್ತವ್ಯಕ್ಕೆ ತೆಗೆದು ಕೊಳ್ಳುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಎಮ್ ಐ ಎಮ್ ಪಕ್ಷದ ಮುಖಂಡ ವಿಜಯ ಗುಂಟ್ರಾಳ್ ಸಾಥ್ ನಿಡಿದ ಬೆನ್ನಲ್ಲೇ ಕಾನೂನಾತ್ಮಕ ಹೋರಾಟಕ್ಕೆ ಓಲ ಸಿಕ್ಕಂತಾಗಿದೆ.
ಈ ಹೊರಾಟದ ಹಿನ್ನೆಲೆಯಲ್ಲಿ ಕರ್ಮಚಾರಿಗಳ ಅಳಲು ಆಲಿಸಿದ ಕರ್ನಾಟಕ ಉಚ್ಛ ನ್ಯಾಯಾಲಯವು ಕಿಂಗ್ಸ್ ಸೆಕ್ಯೂರಿಟಿ ಏಜನ್ಸಿಯ ಕಾರ್ಮಿಕ ವಿರೋಧಿ ಚಟುವಟಿಕೆ ಯನ್ನು ಪ್ರಶ್ನಿಸಿ ಕಾರ್ಮಿಕರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಅಂಗಿಕರಿಸಿ ಮುಂದಿನ ಆದೇಶದವರೆಗೂ ಕಿಂಗ್ಸ್ ಏಜನ್ಸಿಯ ವಿರುದ್ಧ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಹೌದು ಕಳೆದ ಒಂದೂವರೆ ತಿಂಗಳಿನಿಂದಲೂ ಸಫಾಯಿ ಕರ್ಮಚಾರಿಗಳು ಏಜನ್ಸಿ ವೀರೋಧ ನೀತಿಯನ್ನು ಖಂಡಿಸಿ ನಡೆಸುತ್ತಿರುವ ಹೋರಾಟವನ್ನು ಯಾವೊಬ್ಬ ಜನನಾಯಕನೂ ಬೆಂಬಲಿಸದೆ ನಿರ್ಲಕ್ಷಿಸಿದ್ದರು.
ಆದ್ರೆ ಎಮ್ ಐ ಎಮ್ ಪಕ್ಷದ ಮುಖಂಡ ಹಾಗೂ ಸಮಾಜ ಸೇವಕ ವಿಜಯ್ ಗುಂಟ್ರಾಳ ಅವರು17-11-2022 ರಿಂದ ಸತತವಾಗಿ 45ದಿನಗಳ ವರೆಗೂ ರೆಲ್ವೆನಿಲ್ದಾಣದಲ್ಲಿ ಏಜೆನ್ಸಿಯ ನಡೆಯ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ನೊಂದ ಕರ್ಮಚಾರಿಗಳ ಪರ ಧ್ವನಿಯಾಗಿ ನಿಂತ ಬೆನ್ನಲ್ಲೆ ಇಂದು ಕರ್ನಾಟಕ ಉಚ್ಛ ನ್ಯಾಯಾಲಯವು ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 92 ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದ ಅನ್ಯರಾಜ್ಯದ ಕಿಂಗ್ಸ್ ಸೆಕ್ಯೂರಿಟಿ ಏಜೆನ್ಸಿಗೆ ತಡೆಯಾಜ್ಞೆ ನೀಡುವ ಮೂಲಕ ಕಳೆದ 20ವರ್ಷಗಳಿಂದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ದುಡಿಯುತ್ತಿದ್ದ ಸಫಾಯಿ ಕರ್ಮಚಾರಿಗಳಿಗೆ ಹೊಸ ಭರವಸೆ ಸಿಕ್ಕಂತಾಗಿದೆ.
ಅಂದು ಖಾಸಗಿ ಏಜನ್ಸಿಯ ನಡೆಯನ್ನ ಖಂಡಿಸಿ 92 ಜನ ಕಾರ್ಮಿಕರು ಹಮ್ಮಿಕೊಂಡ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ,ಆಮರಣ ಉಪವಾಸ ಹೋರಾಟ ನಿರತ ಕಾರ್ಮಿಕರ ಹೋರಾಟದ ಬದುಕಿಗೆ ರಾಜ್ಯ ಉಚ್ಛ ನ್ಯಾಯಾಲಯವು ಬೆಳಕು ಚೆಲ್ಲಿದೆ.