ಸ್ಥಳೀಯ ಸುದ್ದಿ

ವಿನಯ ಅವರಿಗೆ ಡಿಸಿಎಂ ಸ್ಥಾನ ಕೊಡಬೇಕೆಂದು ಆಂಜನೇಯನ ಮೊರೆ ಹೋದ ಕೈ ಪಡೆ

ಧಾರವಾಡ

ಉತ್ತರ ಕರ್ನಾಟಕದ ಪ್ರಭಾವಿ ನಾಯಕ , ಸರ್ವಧರ್ಮದ ಸಮನ್ವಯಕಾರ ಶ್ರಿ ವಿನಯ ಕುಲಕರ್ಣಿ ಅವರಿಗೆ ಡಿಸಿಎಂ ಸ್ಥಾನ ಕೊಡಬೇಕೆಂದು ಒತ್ತಾಯಿಸಿ, ಇಂದು ಧಾರವಾಡದಲ್ಲಿ ಕೈ‌ಪಡೆಯ ಕಾರ್ಯಕರ್ತರು ಮುಖಂಡರು ಬೃಹತ್ ಮೆರವಣಿಗೆ ನಡೆಸಿದ್ರು.

ಕಮಲಾಪೂರದ ಆಂಜನೇಯ ದೇವಸ್ಥಾನದಿಂದ ಲೈನ ಬಜಾರನ ಆಂಜನೇಯ ದೇವಸ್ಥಾನದವರೆಗೂ ಸಾಗಿದ ಮೆರವಣಿಗೆಯಲ್ಲಿ ವಿನಯ ಕುಲಕರ್ಣಿ ಪರ ಘೋಷಣೆಗಳು‌ ಮೊಳಗಿದವು.

ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ವಿನಯ ಅಭಿಮಾನಿಗಳು ಕ್ಷೇತ್ರದ ಮನೆ ಮಗನಾಗಿರುವ ವಿನಯ ಕುಲಕರ್ಣಿ ಅವರು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತಹ ಸರ್ವ ಧರ್ಮಿಯರ ನಾಯಕ. ಇಂತವರಿಗೆ ಡಿಸಿಎಂ ಕೊಟ್ಟರೆ ಉತ್ತರ ಕರ್ನಾಕದ ಅಭಿವೃದ್ಧಿ ಜೋತೆಗೆ ಬಡವರು ದೀನದಲಿತರ ಅಭಿವೃದ್ಧಿ ಆಗುತ್ತೆ ಎನ್ನುವ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರ ಹೊಂದಿದ್ದು, 11 ಕ್ಷೇತ್ರಗಳನ್ನು ವಿನಯ ಅವರು‌ ಬೆಳಗಾವಿ ಉಸ್ತುವಾರಿ ವಹಿಸಿಕೊಂಡ ಮೇಲೆ‌ ಗೆದ್ದು ತೋರಿಸಿದ್ದಾರೆ. ಹಾಗೂ ತಮ್ಮ ಕ್ಷೇತ್ರಕ್ಕೆ ಒಂದು ದಿನವೂ ಪ್ರಚಾರಕ್ಕೆ ಬರದೇ ಗೆದ್ದು ತಮ್ಮ ಶಕ್ತಿ ಏನೆಂದು ಸಾಬೀತು ಪಡಿಸಿದ್ದಾರೆ. ಹೀಗಾಗಿ ಡಿಸಿಎಂ‌ ಜೋತೆಗೆ ಧಾರವಾಡ ಜಿಲ್ಲೆಯ ಉಸ್ತುವಾರಿ ಕೊಡಬೇಕೆಂದು ಇದೇ ಸಂದರ್ಭದಲ್ಲಿ ‌ಅರವಿಂದ ಏಗನಗೌಡರ ಹೇಳಿದರು.
ಬಳಿಕ ಮಾತನಾಡಿದ ಬಸವರಾಜ ಬೆಂಡಿಗೇರಿ ನಾನು ಹುಟ್ಟಿದ ಮಗನಿಗೆ ವಿನಯ ಎಂದು‌ ಹೆಸರು‌ ಇಟ್ಟಿರುವೆ , ಅಷ್ಡೊಂದು ಅಭಿಮಾನ‌ ನನ್ನ ಹಾಗೇ ಬಹಳಷ್ಟು ಮಂದಿಗೆ ಇದೆ. ಹೀಗಾಗಿ ನಮ್ಮ ನಾಯಕರು ಈ ಬಾರಿ ಡಿಸಿಎಂ ಆಗಬೇಕೆಂದರು.

ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಬಂದಿದ್ದ ಬಹಳಷ್ಟು ವಿನಯ ಅಭಿಮಾನಿಗಳು ಈ ಬಾರಿ‌ ವಿನಯ ಅವರನ್ನು ‌ಡಿಸಿಎಂ ಮಾಡಿ‌ ಎಂದು‌ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜಶೇಖರ ಕಮತಿ,ಬಸವರಾಜ ಹೆಬ್ಬಳ್ಳಿ,ರಾಜು ಮಟ್ಟಿ ,ಸಿದ್ದಪ್ಪ ಸಪ್ಪೂರಿ,ವಿನಯ ಬಾಬರ,ಮೈಲಾರಗೌಡ ಪಾಟೀಲ,ರವಿ ಹೊರಗಿನಮಠ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button