ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ವಿವಾದಿತ ಈದ್ಗಾದಲ್ಲಿ 11ದಿಗಳ ಕಾಲ ಗಣೇಶ ಚತುರ್ಥಿ ಆಚರಣೆಗೆ:ಶ್ರೀರಾಮ ಸೇನಾ ಆಗ್ರಹ!

ಹುಬ್ಬಳ್ಳಿ : ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಈದ್ಗಾ ಮೈದಾನದಲ್ಲಿ ಮುಂಬರುವ ಸೆಪ್ಟೆಂಬರ್ ೯ ರಂದು ಗಣಪತಿ ಪ್ರತಿಷ್ಠಾಪನೆಗೆ ಅವಳಿನಗರದ ಪಾಲಿಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶ್ರೀರಾಮ ಸೇನಾ ರಾಜ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ, ಕಳೆದ ವರ್ಷದಂತೆ ಈ ವರ್ಷವೂ ಕೂಡ ನಗರದ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದರು.

ಆದರೆ ಈ ಬಾರಿ ೧೧ ದಿನಗಳವರೆಗೆ ಗಣಪತಿ ಪ್ರತಿಷ್ಟಾಪನೆಗೆ ಅವಕಾಶ ಕಲ್ಪಿಸಬೇಕು ಮತ್ತು ಭಕ್ತಿಗೀತೆ, ನೃತ್ಯ, ದೇಶಭಕ್ತಿ ಕಾರ್ಯಕ್ರಮಬಲ ಸೆರಿದಂತೆ ಸಾಂಸ್ಕೃತಿಕ ಹಾಗೂ ಜಾನಪದ ಕಲೆಗಳಾದ ಡೊಳ್ಳಿನ ಕುಣಿತ,ಕರಡಿ ಮಜಲು, ಭಜನೆ ಮುಂತಾದ ಕಾರ್ಯಕ್ರಮಗಳ ಕುರಿತು ಆಯೋಜನೆಗಳನ್ನು ರೂಪಿಸಲಾಗಿದೆ.

ಈ ನಿಟ್ಟಿನಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಶೀಘ್ರವೇ ಅನುಮತಿ ನೀಡಬೇಕು. ಇದರಿಂದ ಪೂರ್ವ ತಯಾರಿಗಾಗಿ ನಮಗೆ ೩ ಮುಂಚಿತವಾಗಿಯೇ ಮೈದಾನದಲ್ಲಿ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಿಭಾಗದ ಅಧ್ಯಕ್ಷರಾದ ಗದಿಗೆಪ್ಪ ಕುರವತ್ತಿ, ಜಿಲ್ಲಾಧ್ಯಕ್ಷರಾದ ಅಣ್ಣಪ್ಪ ದಿವಟಗಿ, ಜಿಲ್ಲಾ ಗೌರವ ಅಧ್ಯಕ್ಷರಾದ ರಾಜು ಗಾಡಗೋಳಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಮಂಜು ಕಾಟಕರ, ತಾಲೂಕು ಅಧ್ಯಕ್ಷ ಬಸು ದುರ್ಗದ, ನಗರ ಪ್ರಮುಖ ಪ್ರವೀಣ ಮಾಳದಕರ, ಬಸವರಾಜ್ ಗೌಡರು ಸೇರಿದಂತೆ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button