ಸ್ಥಳೀಯ ಸುದ್ದಿ

ಶಸ್ತ್ರಾಸ್ತ್ರ ಹೋಳಿ ಹಬ್ಬದ ಜಾತ್ರೆಗೆ ಹೊರ ರಾಜ್ಯಗಳಿಂದ ಆಗಮಿಸಿದ ಭಕ್ತರು

ಧಾರವಾಡ

ರಾಜ್ಯದಲ್ಲಿಯೇ ವಿಶೇಷವಾಗಿರುವ ಹೋಳಿ ಹಬ್ಬವನ್ನು ಧಾರವಾಡದಲ್ಲಿ ಆಚರಿಸಲಾಗುತ್ತೆ. ಇಲ್ಲಿ ಶಸ್ತ್ರಾಸ್ತ್ರ ಹೋಳಿ ಅಂತಾನೆ ಫೇಮಸ್ ಆಗಿದ್ದು, ಹೊರ ರಾಜ್ಯಗಳಿಂದ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಇಂತಹ ವಿಶೇಷತೆ ಹೊಂದಿರುವ ಧಾರವಾಡ ತಾಲೂಕಿನ ಮುಳುಮುತ್ತಲ ಗ್ರಾಮ.

ಇಲ್ಲಿ ಊರಿನ ಯುವಕರು ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ಊರಿಗೆ ಊರೆ ಪಹರೆ ಕಾಯುತ್ತಾರೆ.

ಅಣ್ಣಿಗೇರಿ ಊರಿನವರು ಇಲ್ಲಿಗೆ ಬಂದು ಕಾಮಣ್ಣನ ಬೆಳ್ಳಿಯ ಕೀರಿಟ್ ತೆಗೆದುಕೊಂಡು ಹೋಗಬಾರದು ಎನ್ನುವ ಉದ್ದೇಶಕ್ಕೆ ಈ ರೀತಿ ಪಹರೆ ಕಾಯಲಾಗುತ್ತೆ.

ಇಂತಹ ವಿಶೇಷ ಕಾಮಣ್ಣನ ಜಾತ್ರೆಯಲ್ಲಿ ನಯಾನಗರದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಭಾಗವಹಿಸಿ ಆರ್ಶೀವಚನ ನೀಡಿದ್ರು.

ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ‌ (ನಯಾನಗರ ಸುಕ್ಷೇತ್ರ ಬೈಲಹೊಂಗಲ್)

ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಧರ್ಮಪತ್ನಿ‌ ಶ್ರೀಮತಿ ಶಿವಲೀಲಾ ಕುಲಕರ್ಣಿ ಅವರ ಅಭಿಪ್ರಾಯ

ಶಾಸಕರಾದ ಅಮೃತ ದೇಸಾಯಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಹಾಗೂ ಶ್ರೀಮತಿ ಶಿವಲೀಲಾ ಕುಲಕರ್ಣಿ , ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಗಣ್ಯರು ಕಾಮಣ್ಣನ ಜಾತ್ರೆಯಲ್ಲಿ ಪಾಲ್ಗೊಂಡು ದರ್ಶನ ಪಡೆದ್ರು.‌

ಹೊರ ರಾಜ್ಯದಿಂದಲೂ ಆಗಮಿಸಿದ‌ ಭಕ್ತಗಣ

ಈಂತಹ ಐತಿಹಾಸಿಕ ಜಾತ್ರೆ ವರ್ಷದಿಂದ ವರ್ಷಕ್ಕೆ‌ ಹೆಚ್ಚೆಚ್ಚು ಪ್ರಸಿದ್ದಿ ಪಡೆಯುತ್ತಿದ್ದು, ಭಕ್ತರ ಇಷ್ಟಾರ್ಥಗಳನ್ನು ನಿಜ ಮಾಡುತ್ತಾ ಸಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button