ಸ್ಥಳೀಯ ಸುದ್ದಿ

ಶಿಸ್ತಿನ ಇಲಾಖೆಯಲ್ಲಿ ಅಂಧಾ ದರ್ಬಾರ್

ಧಾರವಾಡ

ಅದು ಶಿಸ್ತಿಗೆ ಹೆಸರಾದ ಇಲಾಖೆ. ಈ ಇಲಾಖೆಯಲ್ಲಿ ಹಣ ಮಾಡೋದು ಅಷ್ಟೇನೆ ಸುಲಭ ಎನ್ನುವಂತೆ ಆಗಿದೆ.

ಏಕೆಂದ್ರೆ ಇದಕ್ಕೆ ಒಂದು ತಾಜಾ ಉದಾಹಾರಣೆ ಧಾರವಾಡದಲ್ಲಿ ನಡೆದಿದೆ.

ಹೊರ ಜಿಲ್ಲೆಯ ಅಧಿಕಾರಿಯೊಬ್ಬರು ಧಾರವಾಡ ನಗರದಲ್ಲಿ ಕೆಲಸ ಮಾಡುತ್ತಿದ್ದು, ಇವರು‌ ಮಾಡಿರುವ ಯಡವಟಗೆ‌ ಯುವಕನೊಬ್ಬ ಕಾಲು ಮುರಿದುಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆದು ಮನೆಗೆ‌ ಹೋಗಿದ್ದಾನೆ.

ಆತನಿಗೆ ಎಲ್ಲಿಯೂ ಈ ಬಗ್ಗೆ ಹೇಳಬೇಡಾ ಎಂದು ಅಧಿಕಾರಿ ಹೇಳಿದ್ದಾನಂತೆ.

ಇಷ್ಟೇ ಅಲ್ಲದೇ ನಗರದ ಹೊಸ ಬಸ್ ನಿಲ್ದಾಣದ ಮುಂದೆ ಇರುವ ಲಾಡ್ಜ್ ಒಂದರಲ್ಲಿ ಇಸ್ಪೀಟ್ ಆಡಲಾಗುತ್ತಿದೆ ಎಂದು ಮಾಹಿತಿ ಅರಿತ ಆ ಅಧಿಕಾರಿ ಕೇಸ್ ಮಾಡದೇ 2 ಲಕ್ಷ ಪೀಕಿ ಸುಮ್ಮನಾಗಿದ್ದಾರೆ.

ಇದೇ ರೀತಿ ಕಾರಾಗೃಹದ ಸಮೀಪ ಇರುವ ಪ್ರದೇಶದ ಸುತ್ತಮುತ್ತಲೂ ಏಕಾ‌ಏಕಿ ಇಸ್ಪೀಟ ಆಡುತ್ತಿದ್ದ ಕಡೆ ದಾಳಿ‌ ಮಾಡಿ ಅಲ್ಲಿಯೂ ಹಣ ಪಡದು ಸಮ್ಮನಾಗಿದ್ದಾರೆ.

ಹೊರ ಜಿಲ್ಲೆಯಿಂದ ಜಿಲ್ಲೆಯಲ್ಲಿ ನಗರ ಪ್ರದೇಶಲ್ಲಿ ಕೆಲಸ ಮಾಡುತ್ತಿರುವ ಇವರ ವರ್ತನೆ ಇದೀಗ ಎಲ್ಲರಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಇವರು ಪಡೆದ ದುಡ್ಡು ಅಕೌಂಟ್ ಮೂಲಕ ಆದ್ರೆ ಯಡವಟ್ ಆಗುತ್ತೆ ಎಂದು ಕೈ ಗಡ ಪಡೆದಿದ್ದಾರೆ ಎನ್ನುವ ಮಾಹಿತಿಯೂ ಇದೆ.

ಇದಕ್ಕೆ ಮೇಲಾಧಿಕಾರಿಗಳು ಸಾಥ್ ಕೊಟ್ಟರಾ,? ಅಥವಾ ಇವರೇ ಮೇಲಾಧಿಕಾರಿಗಳಿಗೆ 2 ಲಕ್ಷದಲ್ಲಿ ಅರ್ಧ ಪಾಲು ಕೊಟ್ರಾ ಎನ್ನುವುದು ಹಿರಿಯ ಅಧಿಕಾರಿಗಳೇ ಹೇಳಬೇಕಿದೆ.

ಅದೇನೆ ಆಗಲಿ ಕುಂಬಳಕಾಯಿ ‌ಕಳ್ಳ ಹೆಗ್ಗಲುಮುಟ್ಟಿ ನೋಡಿಕೊಂಡ ಎನ್ನುವಂತೆ ಈ ಸುದ್ದಿ ನೋಡಿದ ಆ ಅಧಿಕಾರಿ ಮತ್ತೊಂದು ಯಡವಟ್ ಮಾಡುವುದರಲ್ಲಿ ಯಾವುದೇ ಸಂದೇಹವೇ ಇಲ್ಲಾ…

ಪವರ್ ಸಿಟಿ ನ್ಯೂಸ್ ಕನ್ನಡ
ಇದು ಸತ್ಯ ಸದಾಕಾಲ

Related Articles

Leave a Reply

Your email address will not be published. Required fields are marked *

Back to top button