ಸ್ಥಳೀಯ ಸುದ್ದಿ

ಶ್ರೀ ಗುರು ರಾಘವೇಂದ್ರ ಮಠದಲ್ಲಿ ೫೧ ಗಣ ಹೋಮ ಕಾರ್ಯಕ್ರಮ

ಗದಗ: ಜಿಲ್ಲೆಯ ಗಜೇಂದ್ರಗಡ ನಗರದಲ್ಲಿ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ೫೧ ಗಣ ಹೋಮಗಳನ್ನು ನೆರವೆರಿಸಲಾಯಿತು.

ಈ ವರ್ಷ ಅಧಿಕ ಮಾಸ ಇರುವುದರಿಂದ ಉಡುಪಿಯ ಮಹಾಸಂಸ್ಥಾನದ ಮಠಗಳಲ್ಲಿ ಒಂದಾದ ಶ್ರೀ ಗುರು ರಾಘವೇಂದ್ರ ಮಠದಲ್ಲಿ ೫೧ ಗಣ ಹೋಮಗಳನ್ನು ಆಯೋಜಿಸಲಾಗಿತ್ತು.ಅಧಿಕ ಮಾಸ ಎಂದರೆ ಅತ್ಯಧಿಕ ಫಲ ನೀಡುವ ಮಾಸ ಇದಾಗಿದ್ದು, ಅಷ್ಟ ದ್ರವ್ಯ ಹೋಮಗಳನ್ನು ನೆರವೆರಿಸಲಾಯಿತು. ನಗರದಲ್ಲಿನ ಶ್ರೀನಿವಾಸ ಬಾಕಳೆ ಸೇರಿದಂತೆ ನಗರದ ಎಲ್ಲಾ ಭಕ್ತಾದಿಗಳು ಇಂತಹ ಮಹತ್ತ ಕಾರ್ಯ ನಡೆಯಲು ಸಾಕ್ಷಿಯಾಗಿದ್ದರು.ನಂತರ ೩೩ ಭಾಗೀಣಗಳನ್ನು ಅರ್ಪಿಸಲಾಯಿತು.

ಗಣಹೋಮವನ್ನು ತಿರುಪತಿ ಆಚಾರ್ಯ,ಲಕ್ಮೀಕಾಂತ ಆಚಾರ್ಯ,ಗುರುರಾಜ ಆಚಾರ್ಯಗಳು ಧರ‍್ಮಿಕ ವಿಧಿವಿಧಾನದ ಮೂಲಕ ಹೋಮಗಳನ್ನು ನೆರವೆರಿಸಿದರು.

ಬಳಿಕ ತಿರುಪತಿ ಆಚಾರ್ಯ ಮಾತನಾಡಿ ಸಂಕಷ್ಟ ಹರ ಗಣಪನ ಸಂಕಷ್ಟಿಯ ವೃತ ಪೂರ್ಣಗೊಳ್ಳಬೇಕಾದರೆ ಗಣ ಹೋಮಗಳನ್ನು ಮಾಡಬೇಕಾಗಿದೆ.ಇತ್ತಿಚಿನ ಮನೆಗಳು ಚಿಕ್ಕದ್ದಾಗಿದ್ದು ಮನೆಯಲ್ಲಿ ಹೋಮಗಳನ್ನು ಮಾಡಲು ಆಗುವುದಿಲ್ಲ ಬದಲಾಗಿ ಇಂತಹ ಸಾಮೂಹಿಕ ಗಣ ಹೋಮದಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳಬೇಕಾಗಿದೆ.ಮೊದಕ ಸಹಿತವಾಗಿ, ಅಷ್ಟ ದ್ರವ್ಯ ಹೋಮಗಳನ್ನು ಮಾಡಲಾಯಿತು, ಆ ಭಗವಂತನು ಹೋಮದಲ್ಲಿ ಭಾಗಿಯಾದ ಎಲ್ಲರಿಗೂ ಒಳಿತು ಮಾಡಲಿ. ಈ ಕಲಿಯುಗದಲ್ಲಿ ಇಂತಹ ಗಣ ಹೋಮಗಳು ಅತ್ಯವಶ್ಯಕವಾಗಿದೆ.ಗಣಹೋಮದಲ್ಲಿ ನವಗ್ರಹ,ಬ್ರಹ್ಮಾದಿ ಮಂಡಳ ಹೋಮ,ನವಗ್ರಹ ಮುಖ್ಯ ದೇವತಾ,ಅಧಿದೇವತಾ,ಅಷ್ಟದಿಕಪಾಲಕ ಹೋಮಗಳನ್ನು ಮಾಡಲಾಗಿದೆ ಎಂದರು.

ಬಳಿಕ ಶ್ರಿನಿವಾಸ ಬಾಕಳೆ ಮಾತನಾಡಿ ಜಗತ್ತಿನ ಕಲ್ಯಾಣಾರ್ಥವಾಗಿ ಅಧಿಕವಾಸವೂ ಈ ವರ್ಷ ಬಂದಿದೆ ಆದ ಕಾರಣ ಉಡುಪಿಯ ಶ್ರೀಗಳ ಆದೇಶ ಹಾಗೂ ಆರ್ಶಿವಾದಗಳೊದಿಗೆ ನಗರದಲ್ಲಿ ಹೋಮಗಳನ್ನು ನೆರವೆಸಿದ್ದೇವೆ. ಮೊದಲು ಇದನ್ನು ೩೩ಕ್ಕೆ ಸೀಮಿತಗೊಳಿಸಿದ್ದೇವು.ಶ್ರೀ ಮಠದ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಅದನ್ನು ೫೧ಕ್ಕೆ ಏರಿಸಿ, ೫೧ ದಂಪತಿಗಳಿಂದ ಹೋಮಗಳನ್ನು ಮಾಡಲಾಯಿತು.

ನಗರ ಸೇರಿದಂತೆ ಸುತ್ತಮುತ್ತಲಿನ ಜನರು ಈ ಇಂತಹ ಮಹತ್ತ ಕಾರ್ಯಕ್ಕೆ ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದ್ದಾರೆ.ರಾಯರು ಅವರಿಗೆ ಒಳಿತು ಮಾಡಲಿ ಎಂದರು.

ಇದೇ ಸಂದರ್ಭದಲ್ಲಿ ನಗರದ ರಾಯರ ಭಕ್ತರು ಇದ್ದರು.

Related Articles

Leave a Reply

Your email address will not be published. Required fields are marked *

Back to top button