ಸ್ಥಳೀಯ ಸುದ್ದಿ

ಸಮಾನತೆಯ ಹರಿಕಾರ ಬಸವಣ್ಣ: ಶಾಸಕ ಅಮೃತ ದೇಸಾಯಿ


ಧಾರವಾಡ

ಯಾವುದೆ ಜಾತಿ, ಜನಾಂಗ ಹಾಗೂ ಲಿಂಗ-ಬೇಧ ವಿಲ್ಲದ ಎಲ್ಲರೂ ಸರಿ ಸಮಾನರು ಎಂಬ ಸಮಾನತೆಯ ಸಂದೇಶ ಸಾರಿರುವ ಜಗತ್ ಜ್ಯೋತಿ ಬಸವಣ್ಣನವರು ಇಡೀ ವಿಶ್ವಕ್ಕೆ ಗುರುವಾಗಿದ್ದಾರೆ. ಅವರು ರಚಿಸಿದ ವಚನಗಳು ನಮ್ಮೆಲ್ಲರಿಗೆ ದಾರಿ ದೀಪವಾಗಿವೆ ಎಂದು ಧಾರವಾಡ ಶಾಸಕ ಅಮೃತ ದೇಸಾಯಿ ಹೇಳಿದರು.


ಬಸವ ಜಯಂತಿ ಅಂಗವಾಗಿ ಧಾರವಾಡ ಜುಬ್ಲಿ ಸರ್ಕಲ್ ಬಳಿಯ ವಿಶ್ವ ಗುರು ಬಸವಣ್ಣನವರ ಮೂರ್ತಿಗೆ ಭಾನುವಾರ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದ ನಂತರ ಅವರು ಮಾತನಾಡಿದರು.
ತಮ್ಮ ಅಸಂಖ್ಯಾತ ವಚನಗಳ ಮೂಲಕ ಸಮಾನತೆ ಹಾಗೂ ಕಾಯಕದ ಶ್ರೇಷ್ಠತೆಯ ಬಗ್ಗೆ ಬಸವಣ್ಣನವರು ಸಾರಿದ್ದಾರೆ. ಬಸವಣ್ಣನವರ ಜೀವನ ಮತ್ತು ಸಂದೇಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ಭಾರತವು ಬರುವ ದಿನದಲ್ಲಿ ವಿಶ್ವಗುರು ಆಗುವ ಎಲ್ಲಾ ಅವಕಾಶಗಳು ಇದ್ದು, ಇಡೀ ಜಗತ್ತೆ ಭಾರತವನ್ನು ಅನುಕರಣೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುನೀಲ ಮೋರೆ, ಶ್ರೀನಿವಾಸ ಕೋಟ್ಯಾನ, ಬಸಣ್ಣ ಮಟ್ಟಿ, ಶಂಕರ ಶೇಳಕೆ, ವೀರೇಶ ಹಿರೇಮಠ, ಬಸವರಾಜ ಪಲೋಟಿ, ವಿನಾಯಕ ಗೋಂಧಳಿ, ಮುತ್ತು ಬನ್ನೂರ, ನಾಗರಾಜ ಗಾಣಿಗೇರ, ಪ್ರವೀಣ ಕಾಂಬಳಿ, ಶಂಕರ ಹಾರಿಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ದೇಸಾಯಿ ಖಂಡನೆ:
ಲಿಂಗಾಯತರು ಸಿಎಂ ಆಗುವ ಕುರಿತು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಧಾರವಾಡ ಶಾಸಕ ಅಮೃತ ದೇಸಾಯಿ ತೀವ್ರವಾಗಿ ಖಂಡಿಸಿದ್ದಾರೆ.
ಕೇವಲ ಜಾತಿ, ಜಾತಿಗಳ ಮಧ್ಯೆ ಒಡಕು ಉಂಟು ಮಾಡುತ್ತಾ ರಾಜಕಾರಣ ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು , ಲಿಂಗಾಯತರ ವಿಷಯದಲ್ಲಿ ಬಹಳಷ್ಟು ಕೀಳು ಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಬಸವಣ್ಣನವರ ಸಮಾನತೆಯ ತತ್ವದಲ್ಲಿ ಜೀವನ ಸಾಗಿಸುತ್ತಿರುವ ಲಿಂಗಾಯತರು ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕರಾದ ಅಮೃತ ದೇಸಾಯಿ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button