ಸ್ಥಳೀಯ ಸುದ್ದಿ

ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಅವರ 162 ನೇ ಜಯಂತಿಗೆ ಸಿದ್ಧತೆ

ಧಾರವಾಡ

ಅಖಿಲ ಭಾರತೀಯ ವೀರಶೈವ-ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರಾದ ತ್ಯಾಗವೀರ ಮಹಾದಾನಿ, ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಅವರ 162 ನೇ ಜಯಂತಿಯನ್ನು ಜನೇವರಿ 10 ರಂದು ಧಾರವಾಡದ ಮಗದುಮ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಲಿಂಗರಾಜ ವಿವಿಧೋದ್ದೇಶ ಸಂಸ್ಥೆ (ರಿ) ಪದಾಧಿಕಾರಿಗಳು ತಿಳಿಸಿದ್ರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌
ಅಖಿಲ ಭಾರತ ಲಿಂಗಾಯತ್ ಕುಡವಕ್ಕಲಿಗ ಮಹಾಸಭಾದ ಅಧ್ಯಕ್ಷರಾದ ಬಿ.ಬಿ.ಪಾಟೀಲ,
ಕಾರ್ಯಕ್ರಮದ ಉದ್ಘಾಟನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾಡಲಿದ್ದು, ಅಧ್ಯಕ್ಷತೆಯನ್ನ ಮಾನ್ಯ ಸಭಾಪತಿಗಳಾದ ಬಸವರಾಜ ಹೊರಟ್ಟಿ ವಹಿಸಲಿದ್ದಾರೆ.

ದಿವ್ಯ ಸಾನಿಧ್ಯವನ್ನು ಡಂಬಳ-ಗದಗನ ಶ್ರೀ ಯಡಿಯೂರ ತೋಂಟದಾರ್ಯ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ತೋಂಟದಾರ್ಯ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಹುಬ್ಬಳ್ಳಿ ಹಾಗೂ ವಿರಕ್ತಮಠ ಹಾನಗಲನ ಶ್ರೀ ಜಗದ್ಗುರು ಮೂರುಸಾವಿರ ಮಠ ಮಹಾ ಸಂಸ್ಥಾನದ ಶ್ರೀ ಮ.ನಿಂ.ಜಗದ್ಗುರು ಡಾ. ಗುರುಸಿದ್ದರಾಜಯೋಗೇಂದ್ರ ಮಹಾಸ್ವಾಮೀಜಿ
ಹಾಗೂ ಧಾರವಾಡ ಮುರಘಾಮಠದ ಶ್ರೀ. ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ, ಸಚಿವರಾದ ಸಿ.ಸಿ.ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಎಂ.ಬಿ.ಪಾಟೀಲ್, ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ‌ ದೇಸಾಯಿ ಭಾಗವಹಿಸಲಿದ್ದಾರೆ.

ಧಾರವಾಡದಲ್ಲಿ ಬೆಳಿಗ್ಗೆ‌ 8.30 ರಿಂದ ಸಪ್ತಾಪೂರದ ಮೂಲಕ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.

ಸಿರಸಂಗಿ ಲಿಂಗರಾಜರದು ಸ್ವಾತಂತ್ರ್ಯ ಪೂರ್ವದಲ್ಲಿ ಲಿಂಗಾಯತ ಸಮುದಾಯದ ಅಭಿವೃದ್ಧಿ ಜೋತೆಗೆ ಕೃಷಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರು.

ಅಂದಿನಿಂದ ಇಂದಿನವರೆಗೂ ಅವರು ಮಾಡಿರುವ ಕೆಲಸಗಳು ನಮಗೆಲ್ಲಾ ನೆನಪಿವೆ.

ಅವರು ಮಾಡಿರುವ ಕೆಲಸದಿಂದ ಶಿಷ್ಯವೇತನ ಪಡೆದು ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.

ಸಿರಸಂಗಿ ಲಿಂಗರಾಜರ ಹೆಸರು ಸೂರ್ಯ ಚಂದ್ರ ಇರುವವರೆಗೂ ಅವರ ಹೆಸರು ಅಜರಾಮರಾಗಿರುತ್ತದೆ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.

ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ರವಿ ಕುಡವಕ್ಕಲಿಗೇರ, ಎಸ.ಜೆ.ಹುಬ್ಬಳ್ಳಿ, ಎ.ಎಸ್.ಪಾಟೀಲ್, ಬಿ.ಬಿ.ಪಾಟೀಲ ಶೇಗುಣಶಿ, ಬಸವನಗೌಡ ಪಾಟೀಲ, ಎಂ.ಸಿ.ಹುಲ್ಲೂರು, ಆರ.ಪಿ.ಹುಲ್ಲೂರು, ನಿವೃತ್ತ ಪ್ರಾಧ್ಯಾಪಕ ಎಫ್.ವಿ.ಯಾವಗಲ್ , ಪ್ರಕಾಶ ಪಾಟೀಲ್ ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button