ಸ್ಥಳೀಯ ಸುದ್ದಿ

ಸುಚಿರಾಯು ಆಸ್ಪತ್ರೆ OPD ಇದೀಗ ಧಾರವಾಡದಲ್ಲಿ ಆರಂಭ

ಧಾರವಾಡ

ಸುಮಾರು ಒಂದು ದಶಕಗಳಿಂದ ಹುಬ್ಬಳ್ಳಿಯಲ್ಲಿ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಸುಚಿರಾಯು
ಆಸ್ಪತ್ರೆ ಇದೀಗ ಧಾರವಾಡ ನಗರದಲ್ಲಿ ತನ್ನ ಅಸ್ಪತ್ರೆಯ ಓಪಿಡಿ ಶಾಖೆಯನ್ನು ತೆರೆಯಲಿದೆ ಎಂದು ಖ್ಯಾತ ಹೃದ್ರೋಗ ತಜ್ಞ ರಾದ ಡಾ.ಷಣ್ಮುಖ ಹಿರೇಮಠ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಒಪಿಡಿ ಶಾಖೆಯಲ್ಲಿ ಖ್ಯಾತ ಹೃದ್ರೋಗ ತಜ್ಞ ರಾದ ಡಾ.ಷಣ್ಮುಖ ಹಿರೇಮಠ ಅವರು ಹೃದ್ರೋಗ ಸಮಸ್ಯೆ ಇರುವ ರೋಗಿಗಳಿಗೆ ಚಿಕಿತ್ಸೆ ಕೊಡಲಿದ್ದಾರೆ.

ಧಾರವಾಡದ ಬಾಸೆಲ್ ಮಿಶನ್ ಶಾಲೆಯ ರಸ್ತೆಯಲ್ಲಿರುವ ಸುಪರ್ ಸ್ಪೆಶಾಲಿಟಿ ಕ್ಲಿನಿಕನಲ್ಲಿಯೂ ಈ ಒಪಿಡಿ ಸೇವೆ ಇರಲಿದೆ ಎಂದರು.


‘ಹುಬ್ಬಳ್ಳಿಗೆ ಬಹಳಷ್ಟು ರೋಗಿಗಳು ಧಾರವಾಡದಿಂದ ಬರಲು ಆಗುವುದಿಲ್ಲಾ ನಾನಾ ತೊಂದ್ರಗಳು ಇರುವುದರಿಂದ ಹೃದ್ರೋಗ ಸಮಸ್ಯೆ ಇರುವ ರೋಗಿಗಳ ಅನುಕೂಲಕ್ಕಾಗಿ ಈ ಓಎಡಿ ಆರಂಭಿಸಲಾಗುತ್ತಿದೆ ಎಂದರು.
ಡಾ.ಷಣ್ಮುಖ ಹಿರೇಮಠ ಅವರು ಖ್ಯಾತ ಹೃದ್ರೋಗ ಶಸ್ತ್ರ ಚಿಕಿತ್ಸೆ ತಜ್ಞರಾಗಿದ್ದು, 1999 ರಿಂದ 2005 ರವರೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ನಂತರ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ 2006 ರಿಂದ 2007 ರವರೆಗೆ ಕೆಲಸ ಮಾಡಿದ್ದಾರೆ.
2007 ರಿಂದ 2008 ರವರಗೆ ಕೇರಳ ಕೋಚಿನನಲ್ಲಿ ಅಮ್ಮತ ಇನ್ನಿ ಬೂಟಿನಲ್ಲಿ ಹೃದ್ರೋಗೆ ಶಸ್ತ್ರ ಚಿಕಿತ್ಸಕರಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಡನಲ್ಲಿ ಹಾರ್ಟ ಟ್ರಾನ್ಸಪರಂಟ್ (transparant) ತರಬೇತಿಯನ್ನು ಮುಗಿಸಿದ್ದಾರೆ.
ಧಾರವಾಡದಲ್ಲಿ ಪ್ರಥಮ ಭಾರಿಗೆ 2008 ರಲ್ಲಿ ಹೃದ್ರೋಗ ವಿಭಾಗವನ್ನು ಪ್ರಾರಂಭ ಮಾಡಿದ ಕೀರ್ತಿ ಡಾ.ಷಣ್ಮುಖ ಹಿರೇಮಠ ಅವರಿಗೆ ಸಲ್ಲುತ್ತದೆ.
ಒಟ್ಟು 25 ವರ್ಷಗಳ ಕಾಲದ ವೈದ್ಯಕೀಯ ಸೇವೆ ಅನುಭವ ಹೊಂದಿದ್ದಾರೆ ಡಾ.ಷಣ್ಮುಖ ಹಿರೇಮಠ.

2021 ರಿಂದ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡುತ್ತಾ ಇದ್ದು, ಇದೀಗ ಧಾರವಾಡದ ಭಾಗದವರಿಗೆ ಅನುಕೂಲವಾಗಲು ಸುಚಿರಾಯು ಆಸ್ಪತ್ರೆ
ಓಪಿಡಿ ತೆರೆಯಲಾಗುತ್ತಿದೆ. ಡಾ.ಷಣ್ಮುಖ ಹಿರೇಮಠ ಅವರೊಂದಿಗೆ ಡಾ.ಶರಣ ಹಳ್ಳದ ಕೂಡ ಒಪಿಡಿಯಲ್ಲಿ ರೋಗಿಗಳ ಚಿಕಿತ್ಸೆ
ಸೇವೆಗೆ ಲಭ್ಯವಿರಲಿದ್ದಾರೆ ಎಂದರು.

Related Articles

Leave a Reply

Your email address will not be published. Required fields are marked *

Back to top button