ಸ್ಥಳೀಯ ಸುದ್ದಿ

ಸುದೀರ್ಘ 33 ವರ್ಷದ ಬಿಜೆಪಿಯ ನಂಟಿಗೆ ಗುಡಬೈ ಹೇಳಿದ ಜಗದೀಶ ಶೆಟ್ಟರ – ಮುಂದಿನ ನಡೆ ಕಾಂಗ್ರೆಸ್ ನತ್ತ

ಧಾರವಾಡ

ಧಾರವಾಡ ಜಿಲ್ಲೆಯ ಹಿರಿಯ ಬಿಜೆಪಿ ರಾಜಕಾರಣಿ ಜಗದೀಶ ಶೆಟ್ಟರ ಇಂದು ಬಿಜೆಪಿ ಪಕ್ಷಕ್ಕೆ ಗುಡಬೈ ಹೇಳಿದ್ದಾರೆ.

ಶಿರಸಿಯಲ್ಲಿ ಸ್ಪೀಕರ್ ಕಾಗೇರಿ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದ ಶೆಟ್ಟರ ತಮಗೆ ಟಿಕೆಟ್ ವಿಚಾರದಲ್ಲಿ ಬಿಜೆಪಿ ಪಕ್ಷ ನಡೆಸಿಕೊಂಡ ಬಗ್ಗೆ ಅಸಮಾಧಾನ ಹೊರ ಹಾಕಿದ್ರು.

ಶೆಟ್ಟರ ಅವರು ಬಿಜೆಪಿಯಲ್ಲಿ ಹಂತ ಹಂತವಾಗಿ ಬೆಳೆದು ಬಂದ ದಾರಿ ಹೀಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಡೆದು ಬಂದು ದಾರಿ

  • 1990 ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕು ಘಟಕದ ಅಧ್ಯಕ್ಷ.
  • 1994 ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ.
  • 1994 ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಹುಬ್ಬಳ್ಳಿ ಗ್ರಾಮಾಂತರ ಪ್ರದೇಶದ ಶಾಸಕರಾಗಿ.
  • 1999 ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ.
  • 1999 ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ.
  • 1999 ರಲ್ಲಿ 11ನೇ ವಿಧಾನಸಭೆಯ ವಿರೋದ ಪಕ್ಷದ ನಾಯಕ.
  • 2004 ಮೂರನೇ ಬಾರಿಗೆ ವಿಧಾನಸಭೆ ಪ್ರವೇಶ.
  • 2005 ಬಿಜೆಪಿ ರಾಜ್ಯಾಧ್ಯಕ್ಷ.
  • 2006 ಕಂದಾಯ ಇಲಾಖೆಯ ಮಂತ್ರಿ (ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ)
  • 2008 ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶ.
  • 2008 13 ನೇ ವಿಧಾನಸಭೆ ಸಭಾದ್ಯಕ್ಷರು.
  • 2009 ಗಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ಸಚಿವರುಬ.
  • 2012 ಜುಲೈ 12 ರಂದು ಗುರುವಾರ ಕರ್ನಾಟಕದ 27 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
  • 2013 ಐದನೇ ಬಾರಿಗೆ ವಿಧಾನಸಭೆ ಪ್ರವೇಶ.
  • 2013 ವಿಧಾನಸಭೆಯ ವಿರೋದ ಪಕ್ಷದ ನಾಯಕ.
  • 2018 6ನೇ ಬಾರಿಗೆ ವಿಧಾನಸಭೆ ಪ್ರವೇಶ.
  • 2019 ಬೃಹತ್ ಕೈಗಾರಿಕಾ ಸಚಿವರಾಗಿ ಕೆಲಸ.

ಇಂದು ಶೆಟ್ಟರ್ ರಾಜಿನಾಮೆ ಸಲ್ಲಿಸುವೆ ವೇಳೆ ಯಡಿಯೂರಪ್ಪ ಅವರ ಬೀಗರೂ ಆಗಿರುವ ಕುಂದಗೋಳ‌ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ.ಐ ಚಿಕ್ಕನಗೌಡ್ರ ಜೋತೆ ಜೊತೆಗೆ ಧಾರವಾಡ ಗ್ರಾಮೀಣ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜೈನ ಸಮುದಾಯದ ಪ್ರಭಾವಿ ಮುಖಂಡ ತವನಪ್ಪ ಅಷ್ಟಗಿ ಇದ್ದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೋಸಾ ಕಲ್ಬುರ್ಗಿ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾಹುಕಾರ್ ಸೇರಿದಂತೆ ಶೆಟ್ಟರ ಬೆಂಬಲಿಗರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button