ಸ್ಥಳೀಯ ಸುದ್ದಿ

ಸೃಜನಾತ್ಮಕ ಕಲಿಕೆ ಅಗತ್ಯ

ಮಕ್ಕಳಲ್ಲಿ ಸಂಸ್ಕೃತಿ ಆಧಾರಿತ ಸೃಜನಾತ್ಮಕ ಕಲಿಕೆ ಅಗತ್ಯವಿರುವುದಾಗಿ ಶಿಕ್ಷಣ ತಜ್ಞ ಶ್ರೀ ಸುರೇಶ ಕುಲಕರ್ಣಿ ಹೇಳಿದರು.

ನಗರದ ಸಾಫಲ್ಯ ಪ್ರತಿಷ್ಠಾನದ ಸಂಸ್ಕೃತಿ ಶಿಶು ಮಂದಿರದ ವಾರ್ಷಿಕೋತ್ಸವ ಮತ್ತು ಯಶೋನ್ನತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಬರೀ ಅಂಕಗಳ ಆಧಾರಿತ ಬಾಯಿಪಾಠ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಯಾವುದೇ ಉಪಯೋಗವಿಲ್ಲ. ಇದು ಗುಮಾಸ್ತರನ್ನು ನಿರ್ಮಾಣ ಮಾಡುವ ಮೂಲಕ, ಮಾದರಿ ಶಿಕ್ಷಣ ಭಾರತೀಯತೆಯನ್ನು ಮುಚ್ಚಿ ಹಾಕಿದೆ ಎಂದು ಹೇಳಿದರು.

ಇನ್ನೋರ್ವ ಅತಿಥಿಯಾದ ಹರ್ಷಜ್ಞಾನ ಪೌಂಡೇಷನ್ ಸಂಸ್ಥಾಪಕರಾದ ಶ್ರೀಮತಿ ಸುಮಂಗಲಾ ದಾಂಡವಾಲೆ ಮಾತನಾಡಿ ಮಕ್ಕಳ ಕಲಿಕೆ ಹಾಗು ಬೆಳವಣಿಗೆಯಲ್ಲಿ ಶಿಕ್ಷಕರು ಮತ್ತು ಪಾಲಕರ, ಪಾತ್ರ ಸಮನಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಶಿಶು ಮಂದಿರದ ಸಂಸ್ಥಾಪಕರಾದ ಶ್ರೀ ಪ್ರಹ್ಲಾದ ಜೋಶಿ ರವರು ಮಾತನಾಡಿದರು.
ಶ್ರೀಮತಿ ರಜನಿ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಶಿಶು ಮಂದಿರದ ಮಕ್ಕಳು ಚಾಣಕ್ಯ, ವೀರಶಿವಾಜಿ, ಡಾ|| ಅಂಬೇಡ್ಕರ, ವಿಶ್ವೇಶ್ವರಯ್ಯ, ರಾಣಿಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಮುಂತಾದ ರೂಪಕಗಳಲ್ಲಿ ಕಂಗೊಳಿಸಿದರು.
ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ದೀಕ್ಷಾಂತ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಹಿರಿಯ ಪೌರ ಕಾರ್ಮಿಕರಾದ ಶ್ರೀಮತಿ ರುಕ್ಕಿಣಿಯಮ್ಮ ಮತ್ತು ವಿಕಲಚೇತನ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀ ಕೇಶವ ತೆಲಗು ರವರನ್ನು ಸನ್ಮಾನಿಸಲಾಯಿತು.

ಅರುಂಧತಿ ಸ್ವಾಗತಿಸಿದರು ಹಾಗು ಬಸಮ್ಮಾ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button