ಕಲ್ಬುರ್ಗಿರಾಜಕೀಯರಾಜ್ಯಸ್ಥಳೀಯ ಸುದ್ದಿ

ಸೊಂತ ಗ್ರಾಮ ಪಂಚಾಯತಿಗೆ ಶರಣಾದ: ಶರಣು ಕೋರಿ ಮಾಡಿದ್ದೇನು ಗೊತ್ತೆ!

ಕಲಬುರ್ಗಿ: ಜಿಲ್ಲೆಯ ಕಮಲಾಪೂರ ತಾಲ್ಲೂಕಿನ ಸೊಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂತನ ಅಧ್ಯಕ್ಷರ ಜನಪರ ಕಾಳಜಿಯ ಕಾರ್ಯಕ್ಕೆ ಊರಿನ ಜನ ಸೈ ಎಂದಿದ್ದಾರೆ.

ಹೌದು ನೂತನ ಗ್ರಾಪಂ ಅಧ್ಯಕ್ಷರಾದ ನೀಲಮ್ಮ ಕೊರಿಯವರ ಪುತ್ರ ಜನಪರ ನಾಯಕ ಶರಣು ಎಂ ಕೋರಿಯವರು ಅಮ್ಮನಂತೆ ಜನಪರ ವಿಚಾರಕರಾಗಿದ್ದು. ಸೊಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಲವಾರು ಜ್ವಲಂತ ಸಮಸ್ಯೆಗಳ ಪರಿಹಾರ ಕ್ರಮ ಕೈಗೆತ್ತಿಕೊಳ್ಳುವ ಮೂಲಕ ಈ ಹಿಂದಿನ ಜನಪ್ರತಿಧಿಗಳನ್ನು ಮೀರಿಸಿದ್ದಾರೆ. ಅಲ್ಲದೆ ಗ್ರಾಮದ ಜನರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಅವರ ಸಲಹೆ ಸೂಚನೆಗಳನ್ನ ಮುಂದಿಟ್ಟುಕೊಂಡು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದ್ದಾರೆ.

ತಾಯಿ ನಿಲಮ್ಮರ ಅಣತಿಯಂತೆ ಸಾರ್ವಜನಿಕ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ವಿಶೇಷವಾಗಿ ಆಸನದ ವ್ಯವಸ್ಥೆಯನ್ನು ಮಾಡಿ ಜನರಿಗೆ ಅನೂಕೂಲ ಮಾಡಿಕೊಟ್ಟಿದ್ದಾರೆ. ಹಾಗೂ ಇನ್ನಿತರ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಇದರಿಂದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಕಮಲಾಪೂರ ತಾಲ್ಲೂಕಿನ ಯುವ ನಾಯಕ ಜನಮೆಚ್ಚಿದ ನಾಯಕ ಎಂದೇ ಖ್ಯಾತಿಯಾದ ಬಿಜೆಪಿ ಯುವ ಮುಖಂಡರಾದ ಶ್ರೀ ಶರಣು ಎಂ. ಕೋರಿ ಅವರು ಗ್ರಾಮದ ಜನತೆಯ ಸೇವೆಗೆ ಸದಾ ಸಿದ್ಧ ಹಲವಾರು ಜನಪರ ಕಾಳಜಿಯುಳ್ಳ ಕೆಲಸಗಳನ್ನು ಮಾಡುತ್ತಾ ಜನಮೆಚ್ಚಿದ ಮಗನಾದ ಶರಣು ಬಿಜೆಪಿಯ ಯುವ ನಾಯಕರಾಗಿದ್ದಾರೆ.

ಅಮ್ಮನ ಜೊತೆ ಶರಣು ಕೋರಿ!

*ಈ ಸಂದರ್ಭದಲ್ಲಿ ಕಲಬುರ್ಗಿ ಗ್ರಾಮೀಣ ಜನತೆಗೆ ದಸರಾ ಹಬ್ಬದ ಶುಭಾಶಯಗಳು ಕೋರಿ ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯ ಸಮಾಜಮುಖಿ ಕೆಲಸಗಳನ್ನು ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರದಿ – ಆರ್. ವಿ. ಗುಂಡಗುರ್ತಿ ಕಲಬುರ್ಗಿ

Related Articles

Leave a Reply

Your email address will not be published. Required fields are marked *