ಸ್ಥಳೀಯ ಸುದ್ದಿ

ಸ್ವಾಮೀಜಿ 31 ನೇ ಶಿವಗಣಾರಾಧನೆ

ಧಾರವಾಡ

ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಸ್ವಾಮೀಜಿಯೊಬ್ಬರ ಶಿವಗಣಾರಾಧನೆಯನ್ನು ಅತ್ಯಂತ ಸಂಭ್ರಮದ ಸಡಗರದಿಂದ ಗ್ರಾಮಸ್ಥರು ಆಚರಣೆ ಮಾಡಿದ್ರು.

ಶಿಂಗನಹಳ್ಳಿಯ ಪರಮಪೂಜ್ಯ ಲಿಂಗಕ್ಯ ಶ್ರೀಗುರು ರಾಚಯ್ಯಾ ಸ್ವಾಮೀಯವರು ಹಳ್ಳಿಗೇರಿಮಠರ 31 ನೇ ಶಿವಗಣಾರಾಧನೆಯನ್ನು ಗ್ರಾಮಸ್ಥರು ಕುಂಭಮೇಳ ಹಾಗೂ ಆರತಿ ಮೂಲಕ ಊರಿನಲ್ಲಿ ಮೆರವಣಿಗೆ ಮಾಡಿ ಆಚರಣೆ ಮಾಡಿದ್ರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೈಲಹೊಂಗಲ ತಾಲೂಕಿನ ನಯಾನಗರದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಯಾದವಾಡ-ಮುಳಮುತ್ತಲ ಗ್ರಾಮದ ಸಿದ್ಧಾರೂಢಮಠದ ಆನಂದಾಶ್ರಮದ ಡಾ. ಆನಂದಸ್ವಾಮಿಗಳು ವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button