ಸ್ಥಳೀಯ ಸುದ್ದಿ
ಹಳೆ ಎಪಿಎಂಸಿ ರಸ್ತೆ ಕಾಮಗಾರಿ ಪರಿಶೀಲನೆ ಮಾಡಿದ ಮೇಯರ್
ಧಾರವಾಡ
ಧಾರವಾಡದ ಹಳೆ ಎ.ಪಿ.ಎಂ.ಸಿ. ಮಾರುಕಟ್ಟೆ ಆವರಣದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದು, ಅಲ್ಲಿ ಕಾಮಗಾರಿಯ ಅಭಿವೃದ್ಧಿಯ ಹಂತದ ಬಗ್ಗೆ ಮೇಯರ್ ಈರೇಶ ಅಂಚಟಗೇರಿ ವೀಕ್ಷಣೆ ಮಾಡಿದ್ರು.
ಎಪಿಎಂಸಿಯಲ್ಲಿನ ವರ್ತಕರು ಅಲ್ಲಿನ ಸ್ವಚ್ಛತೆಯ ಸಮಸ್ಯೆಗಳ ಬಗ್ಗೆ ಹೇಳಿದಾಗ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಶೀಘ್ರವೇ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು,ವರ್ತಕರ ಸಂಘದ ಅಧ್ಯಕ್ಷರಾದ ಶ್ರೀ ಶಿವಶಂಕರ ಹಂಪಣ್ಣವರವರು, ಶ್ರೀ ಪರಪ್ಪ ಕುಸುಗಲ್ ರವರು, ಶ್ರೀ ವಿಶ್ವನಾಥ ನಡಕಟ್ಟಿ ರವರು, ಶ್ರೀ ಬಸವರಾಜ ಸುರೇಬಾನ ರವರು, ಶ್ರೀ ಬಸವರಾಜ ತೆಗ್ಗಿ, ಶ್ರೀ ಈರಣ್ಣ ಹಂಚಿನಮನಿ, ಶ್ರೀ ಮಲ್ಲಿಕಾರ್ಜುನ ನಂದಿಗೊಳ ರವರು , ಶ್ರೀ ಉಮೇಶ ಗುಡ್ಡದ ರವರು ಹಾಗೂ ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ವರ್ತಕರು ಸಹ ಉಪಸ್ಥಿತರಿದ್ದರು.