ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಿಂದ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಶ್ರೀ ಮಹೇಶ ಟೆಂಗಿನಕಾಯಿ ರವರ ಪರ ಬಿರುಸಿನ ಪ್ರಚಾರ

ಹುಬ್ಬಳ್ಳಿ
ರಾಜ್ಯದ ಹೈವೋಲ್ಟೆಜ್ ಕ್ಷೇತ್ರ
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮಹೇಶ ಟೆಂಗಿನಕಾಯಿ ರವರ ಪರವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು, ಹುಬ್ಬಳ್ಳಿಯ ಅಕ್ಷಯ ಪಾರ್ಕ್, ಡಾಲರ್ಸ್ ಕಾಲೋನಿ, ದೇವಾಂಗಪೇಟೆ, ಪ್ರಶಾಂತ ನಗರ, ಗ್ರೀನ್ ಗಾರ್ಡನ್, ರಾಜಧಾನಿ ನಗರ ಸೇರಿದಂತೆ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳು, ಹಾಗೂ ಮುಂದಿನ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು, ನಾಗರಿಕರಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಶ್ರೀ ಲಿಂಗರಾಜ ಪಾಟೀಲ ರವರು, ಶ್ರೀ ಕಿರಣ ಗಂಡಗಾಳಕರ ರವರು, ಶ್ರೀ ಉಮೇಶ ದುಷಿ ರವರು, ಶ್ರೀ ಈಶ್ವರಗೌಡ ಪಾಟೀಲ ರವರು, ಶ್ರೀ ವಿನಾಯಕ ದೊಂಗಡಿ ರವರು, ಶ್ರೀ ಅಶೋಕ ಮುಮ್ಮಿಗಟ್ಟಿ ರವರು, ಶ್ರೀ ನಾರಾಯಣಸಾ ನಿರಂಜನ ರವರು, ಶ್ರೀ ಹನುಮಂತಸಾ ನಿರಂಜನ ರವರು, ಬಿಜೆಪಿಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಮಸ್ತ ಗುರುಹಿರಿಯರು ಉಪಸ್ಥಿತರಿದ್ದರು.